ಬೆಳಗಾವಿಯಲ್ಲಿ ಶತರಂಜ್ ಚೆಸ್ ಟೂರ್ನಾಮೆಂಟ್…3 ಲಕ್ಷ 20 ಸಾವಿರ ರೂ. ನಗದು ಬಹುಮಾನ..!

ಬೆಳಗಾವಿ: ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥ್ ಮತ್ತು ಬೆಲಗಾಮ್ ಡಿಸ್ಟ್ರೀಕ್ಟ್ ಚೆಸ್ ಅಸೋಸಿಯೇಷನ ವತಿಯಿಂದ ಶತರಂಜ್ ಚೆಸ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು.
ಬೆಳಗಾವಿಯಲ್ಲಿ ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥ್ ಮತ್ತು ಬೆಲಗಾಮ್ ಡಿಸ್ಟ್ರೀಕ್ಟ್ ಚೆಸ್ ಅಸೋಸಿಯೇಷನ ವತಿಯಿಂದ ಶತರಂಜ್ ಚೆಸ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು.
ಒಟ್ಟು 3 ಲಕ್ಷ 20 ಸಾವಿರ ನಗದು ಬಹುಮಾನವನ್ನು ವಿಜೇತರಿಗೆ ನೀಡಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಸಂಜಯ್ ಯಾದವ್, ಗವರ್ನರ್, ಅಸಿಸ್ಟಂಟ್ ಗವರ್ನರ್. ಅನಂತ ನಾಡಗೌಡ ಇನ್ನುಳಿದವರು ಆಗಮಿಸಿದ್ದರು. ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರ, ಗೋವಾ, ದೆಹಲಿ, ತಮಿಳುನಾಡು ಸೇರಿದಂತೆ ಹೊರಗಡೆಯ ಸ್ಪರ್ಧಾಳುಗಳು ಕೂಡ ಭಾಗಿಯಾಗಿದ್ದಾರೆ.
ಈ ಕುರಿತು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥನ ಅಧ್ಯಕ್ಷರಾದ ನೀಲೇಶ್ ಪಾಟೀಲ್ ಅವರು ಪ್ರತಿಬಾರಿಯೂ ಈ ಟೂರ್ನಾಮೆಂಟನ್ನು ಆಯೋಜಿಸಲಾಗುತ್ತದೆ. ಈ ಬಾರಿ 301 ಸ್ಪರ್ಧಾಳುಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.