ಅಥಣಿಕಾಗವಾಡರಾಜ್ಯ

ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಅಣ್ಣಾಸಾಬ ಪಾಟೀಲ ಅವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಕಲಿಕೆ ಸಾಮುಗ್ರಿಗಳ ವಿತರಣೆ..!!

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಕೈ. ಈರಗೌಡ ಬಸಗೌಡ ಪಾಟೀಲ ಮತ್ತು ಕೈ. ಪ್ರತಿಭಾ ದಿಲೀಪ ಪಾಟೀಲ ಇವರ ಸ್ಮರಣಾರ್ಥ ಗ್ರಾಮದ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಸಾಮುಗ್ರಿಗಳನ್ನು ವಿತರಿಸಲಾಯಿತು.

 

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಕೈ. ಈರಗೌಡ ಬಸಗೌಡ ಪಾಟೀಲ ಮತ್ತು ಕೈ. ಪ್ರತಿಭಾ ದಿಲೀಪ ಪಾಟೀಲ ಇವರ ಸ್ಮರಣಾರ್ಥ ಗ್ರಾಮದ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಸಾಮುಗ್ರಿಗಳನ್ನು ವಿತರಿಸಲಾಯಿತು.

ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕರು, ಜುಗೂಳ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಗ್ರಾಮದ ಮುಖಂಡರಾದ ಅಣ್ಣಾಸಾಬ ಪಾಟೀಳ ಸÀರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿ, ಮಾತನಾಡುತ್ತ, ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನ ಸದಸ್ಯರು ನಿಜಕ್ಕೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.

 

ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಾಮುಗ್ರಿಗಳನ್ನು ವಿತರಿಸಲು ಸಹಕರಿಸುವಂತೆ ನಮ್ಮನ್ನು ಅವರು ಕೇಳಿಕೊಂಡಾಗ ಖುಷಿಯಿಂದಲೇ ಅವರ ಕಾರ್ಯವನ್ನು ಮೆಚ್ಚಿಕೊಂಡು ಒಪ್ಪಿರುವುದಾಗಿ ತಿಳಿಸಿದರು. ಇನ್ನೂ ಇದೇ ವೇಳೆ ತಮ್ಮ ತಂದೆಯವರ ಸಮಾಜ ಮುಖಿ ಕಾರ್ಯಗಳನ್ನು ನೆನೆದು ಭಾವುಕರಾದರು.

ಮತ್ತು ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನವರು ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದು ವರೆಸಿಕೊಂಡು ಹೋಗಲಿ ಎಂದು ಶುಭಾಶಯ ಕೋರಿದರು. ಮತ್ತು ನಾವು ನಿಮಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

 

ಇನ್ನೂ ಇದೇ ವೇಳೆ ಉಪಸ್ಥಿತರಿದ್ದ ಗ್ರಾ.ಪಂ. ಅಧ್ಯಕ್ಷ ಕಾಕಾ ಪಾಟೀಲ ಮಾತನಾಡಿ, ಸಿದ್ಧಿ ಫೌಂಡೇಶನ್‌ನವರ ಕಾರ್ಯವನ್ನು ಶ್ಲಾಘೀಸಿದರು. ಈ ಸಮಯದಲ್ಲಿ ಮುಖಂಡರಾ ಸುರೇಶ ಪಾಟೀಲ, ಆನಂದ ಕುಲಕರ್ಣಿ, ಅವಿನಾಶ ಪಾಟೀಲ, ನಿತೀನ ಪಾಟೀಲ, ಚಿದಾನಂದ ತಾರದಾಳೆ ಸೇರಿದಂತೆ ಎರಡೂ ಶಾಲೆಗಳ ಶಿಕ್ಷಕ ವೃಂದದವರು, ಸಿದ್ದಿ ಹುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಹಾಗೂ ಪದಾಧಿಕಾರಿಗಳಾದ ಪ್ರಶಾಂತ ಸಾವಂತ, ಬಾಬಾಸಾಹೇಬ ತಾರದಳೆ, ಸುಧಾಕರ ಸುಂಕೆ, ರಾಜು ಅಮ್ಮನಿಗೆ, ಸುಪಿತ ಗುರುಗೋಳೆ, ಕೇತನ ದಾನೋಳೆ, ಪ್ರತೀಕ್ ಲಾಂಡಗೆ, ವಿಫೂಲ್ ಉಪಾಧ್ಯೆ, ಅಭಿ ಗುರಗೋಳೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button