ಬಿಜಾಪುರ
CA ಪರೀಕ್ಷೆಯಲ್ಲಿ ಉತ್ತಮ ಸಾಧನೆ:ಪ್ರಥಮ ಪ್ರಯತ್ನದಲ್ಲೇ 11ನೇ ರ್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ.

ವಿಜಯಪುರ: ಈ ಬಾರಿಯ CA ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮೆರೆದ ಎಲ್ಲ ಅಭ್ಯರ್ಥಿಗಳಿಗೂ ಹಾರ್ದಿಕ ಶುಭಾಶಯಗಳು.
ವಿಜಯಪುರದ ದೃಷ್ಟಿ ಜೈನ್ ಅವರು ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೂರೈಸಿ, ರಾಷ್ಟ್ರಮಟ್ಟದಲ್ಲಿ 11ನೇ ರ್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿಜಯಪುರ ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಕಂಪೆನಿಯ ಮಾಲೀಕರಾದ ಶ್ರೀ ವಿಶಾಲ್ ಜೈನ್ ಅವರ ಪುತ್ರಿಯಾಗಿರುವ ದೃಷ್ಟಿ ಜೈನ್ ಅವರು ವಿಜಯಪುರದ ಬಿ.ಎಂ. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದರೆಂಬುದು ಇನ್ನಷ್ಟು ಹೆಮ್ಮೆಯ ಸಂಗತಿ. ಅವರಿಗೆ ಅಭಿನಂದನೆಗಳು. ಭವಿಷ್ಯದಲ್ಲಿ ಅವರ ಎಲ್ಲ ಪ್ರಯತ್ನಗಳೂ ಕೈಗೂಡಲಿ ಎಂದು ಹಾರೈಸುತ್ತೇನೆ.