Uncategorized

ಮತ್ತೆ ಜೈಲು ಸೇರುತ್ತಾರೋ ಮಾಜಿ ಸಚಿವ ಹಾಲಿ ಧಾರವಾಡ ಗ್ರಾಮೀಣ ಶಾಸಕ ವಿನಯ..?

ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ ಜತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಹಾಗೂ ಹಾಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಜಾಮೀನು ಈಗ ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, 7 ದಿನಗಳಲ್ಲಿ ಕೋರ್ಟಗೆ ಶರಣಾಗಳು ನ್ಯಾಯಲ ಹೇಳಿದೆ ಎಂದು ಬಸವರಾಜ್ ಕೊರವರ ಹೇಳಿದ್ದರು.
ವಿನಯ ಕುಲಕರ್ಣಿ ಜಾಮೀನು ಸುಪ್ರೀಂ ಕೋರ್ಟ ರದ್ದು ಮಾಡಿರುವ ವಿಚಾರವಾಗಿ ಧಾತವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ, ಯೋಗೇಶಗೌಡ ಕುಟುಂಬರ ಹೋರಾಟಗಾರ ಬಸವರಾಜ್ ಕೊರವರು, ನಾವು 9 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಯೋಗೇಶಗೌಡರ್ ಹತ್ಯೆ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ.‌ ಈ ಮೊದಲು ಕುಲಕರ್ಣಿ ಎಲ್ಲಸಾಕ್ಷಿ ಹ್ಯಾಂಡಲ್ ಮಾಡಿದ್ದರು. ಆಗ ಸಿಬಿಐ ತನಿಖೆಗಾಗಿ ಹೋರಾಟ ಮಾಡಿದ್ದೆವು. ಸಿಬಿಐಗೆ ಹೋದ ಮೇಲೆ ವಿನಯ ಕುಲಕರ್ಣಿಯನ್ನೂ ಆರೋಪಿ ಮಾಡಿದ್ದರು. ಚಾರ್ಜ್‌ಶೀಟ್ ಸಹ ಆಗಿತ್ತು, ವಿಚಾರಣೆ ನಡೆದಿತ್ತು. ಮೊದನಿನಂತೆ ಕುಲಕರ್ಣಿ ಸಾಕ್ಷಿಗಳ ಹ್ಯಾಂಡಲ್ ಮಾಡೋಕೆ ಶುರು ಮಾಡಿದ್ರು.‌ ಸಾಕ್ಷಿ ಗಳಿಗೆ ದುಡ್ಡು ಕೊಡುವ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಬರಹದಲ್ಲಿ ಸಿಬಿಐಗೆ ಕೊಟ್ಟಿದ್ದೇವು. ಅದನ್ನು ಆಧರಿಸಿ ಸಿಬಿಐ ದಾಖಲೆ ಸಂಗ್ರಹಿಸಿತ್ತು. ಸಾಕ್ಷ್ಯಗಳನ್ನು ಕಲೆ ಹಾಕಿ ಕೋರ್ಟ್ ಗೆ ತಂದಿದ್ದರು.
ಕುಲಕರ್ಣಿ ಮತ್ತು ಅವರ ಮಾಮ ಚಂದ್ರಶೇಖರ ಇಂಡಿ ಜಾಮೀನು ರದ್ದತಿಗೆ ಕೇಳಿದ್ರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂಡಿ ಜಾಮೀನು ರದ್ದಾಗಿತ್ತು. ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ಕೊಟ್ಟಿತ್ತು. ಹೀಗಾಗಿ ಅಲ್ಲೇ ಹೋಗಿ ಅಂತಾ ಜನಪ್ರತಿನಿಧಿಗಳ ಕೋರ್ಟ್ ಹೇಳಿತ್ತು. ಸುಪ್ರೀಂ‌ಲ್ಲಿ ಅರ್ಜಿ ಹಾಕಿ ಅದರ ವಿಚಾರಣೆ ನಡೆದು ಇವತ್ತು ಆದೇಶ ಬಂದಿದೆ. ಏಳು ದಿನ ಕಾಲಾವಕಾಶ ಕೊಟ್ಟಿದ್ದರು. ಸಾಕ್ಷಿ ನಾಶ ಮಾಡದಂತೆ ಆಗ ಷರತ್ತು ಹಾಕಿ ಜಾಮೀನು ಕೊಟ್ಟಿದ್ದರು. ಆದರೂ ಮತ್ತೇ ಅದೇ ಕೆಲಸ ಮಾಡುತ್ತಿದ್ದರು.‌
ಓರ್ವ ಸಾಕ್ಷಿಗೆ ಹಣ ಕೊಡುವುದು ಟ್ರಾಪ್ ಆಗಿತ್ತು. ಒಂದು ಲಕ್ಷ ಸಹ ಸೀಜ್ ಆಗಿತ್ತು. ಅದರ ಆಧಾರದ ಮೇಲೆ ಜಾಮೀನು ರದ್ದಾಗಿದೆ.
ಸುಪ್ರಿಂ ಈಗ ಸಾಕ್ಷಿ ಮೇಲೆ ಒತ್ತಡ ಹಾಕದಂತೆ ಹೇಳಿದೆ. ರಾಜ್ಯ ಸರ್ಕಾರ ಜೈಲಿನಲ್ಲಿ ಮುಂದೆ ಕುಲಕರ್ಣಿಗೆ ಫೋನ್ ಸೌಲಭ್ಯ ಕೊಡಬಾರದು. ಹಿಂದೆ ಹಿಂಡಲಗಾ ಜೈಲಿನಲ್ಲಿ ಫೋನ್ ಕೊಟ್ಟಿದ್ದರು. ಜೈಲಿನಲ್ಲಿ ಕುಳಿತೇ ಸಾಕ್ಷಿ ಹ್ಯಾಂಡಲ್ ಮಾಡಿದ್ದರು.‌ ಆ ಕೆಲಸ ಈಗ ಮತ್ತೇ ಆಗಬಾರದು. ಸಾಕ್ಷಿಗಳು ಮುಕ್ತವಾಗಿ ಹೇಳಿಕೆ ಕೊಡಬೇಕು. ನ್ಯಾಯಾಲಯ ಅವರ ಪರವಾಗಿ ಇದೆ, ಜತೆಗೆ ರಾಜ್ಯ ಸರ್ಕಾರ ವಿನಯ ಕುಲಕರ್ಣಿ ಪರ ಬಹಳ ಕೆಲಸ ಮಾಡಿತ್ತು. ಈಗಲೂ ಸಾಕ್ಷಿಗಳ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆದಿದೆ ಎಂದರು

Related Articles

Leave a Reply

Your email address will not be published. Required fields are marked *

Back to top button