Uncategorized

ಸಾವಿನಲ್ಲೂ ರಾಜಕೀಯ ಮಾಡುವವರು ಈ ಭೂಮಿಯಲ್ಲಿದ್ದಾರೆ…

ಸಾವಿನಲ್ಲೂ ರಾಜಕೀಯ ಮಾಡುವವರು ಈ ಭೂಮಿಯಲ್ಲಿದ್ದಾರೆ. ಇಂತಹ ಘಟನೆ ಯಾವ ತಂದೆ-ತಾಯಿ,ರಾಜಕಾರಣಿಗಳು ಭಯಸುವಂತದ್ದಲ್ಲ ಎಂದು ಶಾಸಕ ವಿಜಯಾನಂದ್ ಕಾಶಪ್ಪನವರ್ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್’ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಜಯಗಳಿಸಿತ್ತು.ಸಂಭ್ರಮಾಚರಣೆ ವೇಳೆ ಒಂದು ದುರ್ಘಟನೆ ನಡೆಯಿತು.
ಅದು ಆಗಬಾರದಿತ್ತು.ಕ್ರೀಡೆ ಪ್ರೋತ್ಸಾಹಿಸುವ ಹಿನ್ನೆಲೆ ವಿಧಾನಸೌಧದ ಮುಂದೆ ಅದ್ದೂರಿ ಸನ್ಮಾನ ಮಾಡಿದ್ರು.ಆ ವೇಳೆ ನಡೆದ ದುರ್ಘಟನೆಗೆ ಸರ್ಕಾರ ಹೊಣೆ ಮಾಡೋದು ಸರಿಯಾದದ್ದಲ್ಲ.
ನಾವು ಕ್ರೀಡಾಕೂಟ ಆಯೋಜನೆ ಮಾಡ್ತಿವಿ, ಎಲ್ಲಿ ದುರ್ಘಟನೆಗಳು ನಡೆಯುತ್ತವೆಯೋ ಅಂತಹ ಕಡೆಗಳಲ್ಲಿ ಚಿಕ್ಕಮಕ್ಕಳನ್ನು ಕರೆದುಕೊಂಡು ಹೋಗಲೇಬೇಕು. ಮನೆಯವರು ವಿಚಾರ ಮಾಡಬೇಕು,ಯಾವ ಕಾರ್ಯಕ್ರಮಕ್ಕೆ ಹೋಗಬೇಕು. ಚಿಕ್ಕ ಮಕ್ಕಳನ್ನ ಯಾವ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಕು ವಿಚಾರ ಮಾಡಬೇಕು.
ಅಲ್ಲಿ ನಡೆದಿದ್ದು ಸ್ವಯಂಕೃತ ತಪ್ಪು,ಅಲ್ಲಿ ಅವ್ರು ಹೋಗಿದ್ದಕ್ಕೆ ಆಗಿದೆ. ಆದ್ರೇ ಘಟನೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಕೋರುವೆ. ಸರ್ಕಾರದ ಮೇಲೆ ಆಪಾದನೆ ಮಾಡೋದು ಆಗಬಾರದು. ಸರ್ಕಾರ ಘಟನೆಗೆ ಹೊಣೆಗಾರಿಕೆ ಅನ್ನೋದಕ್ಕೆ ಆಗೋದಿಲ್ಲ.
ಸಾವಿನಲ್ಲೂ ರಾಜಕೀಯ ಮಾಡೋವ್ರು ಈ ಭೂಮಿಯಲ್ಲಿದ್ದಾರೆ. ಇಂತಹ ಘಟನೆ ಯಾವ ತಂದೆ-ತಾಯಿ,ರಾಜಕಾರಣಿಗಳು ಬಯಸುವಂತಹುದ್ದಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button