Uncategorized
ಪತ್ನಿಯನ್ನು ಹತ್ಯೆಗೈದು ಆಕೆಯ ರುಂಡವನ್ನು ಕತ್ತರಿಸಿ ರುಂಡದ ಸಮೇತ ಪತಿ ಮಹಾಶಯ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಪತ್ನಿಯನ್ನು ಹತ್ಯೆಗೈದು ಆಕೆಯ ರುಂಡವನ್ನು ಕತ್ತರಿಸಿ ರುಂಡದ ಸಮೇತ ಪತಿ ಮಹಾಶಯ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಕಾಚನಾಯಕನಹಳ್ಳಿ ನಿವಾಸಿ ಶಂಕರ್(28) ಪತ್ನಿಯನ್ನೇ ಕೊಂದ ಆರೋಪಿ. ಮಾನಸಾ ಪತಿಯಿಂದಲೇ ಹತ್ಯೆಯಾದ ಪತ್ನಿ.
ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆಕೆಯನ್ನು ಹತ್ಯೆಗೈದ ಶಂಕರ್, ಬಳಿಕ ರುಂಡ ಹಿಡಿದು ಬೈಕ್ ನಲ್ಲಿ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.