Uncategorized

ಸೌಥ್ ಏಷ್ಯಾ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್ ವಿಜೇತ ಬೆಳಗಾವಿಯ ಹೆಮ್ಮೆಯ ಪಟುಗಳಿಗೆ ಸಚಿವ ಸತೀಶ ಜಾರಕಿಹೊಳಿ ಅವರಿಂದ ಅದ್ಧೂರಿ ಸನ್ಮಾನ

ಸೌಥ್ ಏಷ್ಯಾ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್ ವಿಜೇತ ಬೆಳಗಾವಿಯ ಹೆಮ್ಮೆಯ ಪಟುಗಳಿಗೆ ಸಚಿವ ಸತೀಶ ಜಾರಕಿಹೊಳಿ ಅವರಿಂದ ಅದ್ಧೂರಿ ಸನ್ಮಾನ
ಭೂತಾನ್‌ನ ತಿಂಫುನಲ್ಲಿ ಇತ್ತೀಚೆಗೆ ಜರುಗಿದ 16ನೇ ಸೌತ್ ಏಷ್ಯನ್ ಚಾಂಪಿಯನ್‌ಶಿಪ್ 2026 ರಲ್ಲಿ ಪದಕ ಗೆದ್ದು ಸಾಧನೆಗೈದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು.
ಅಂತರರಾಷ್ಟ್ರೀಯ ಮಟ್ಟದ ಈ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದೇಶ ಹಾಗೂ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಸಾಧಕರಾದ ಬ್ರಾಂಜ್ ಮೆಡಲಿಸ್ಟ್ ಕೇತಕಿ ಪಾಟೀಲ್, ಗೋಲ್ಡ್ ಮೆಡಲಿಸ್ಟ್ ಪ್ರತಾಪ್ ಕಾಲಕುಂದ್ರಿಕರ ಹಾಗೂ ಸಿಲ್ವರ್ ಮೆಡಲಿಸ್ಟ್ ಪ್ರಶಾಂತ್ ಖನ್ನೂಕರ ಅವರನ್ನು ಸಚಿವರು ಆತ್ಮೀಯವಾಗಿ ಅಭಿನಂದಿಸಿದರು. ಈ ಹೆಮ್ಮೆಯ ಸಮಾರಂಭದಲ್ಲಿ ಪ್ರಮುಖರಾದ ಕೀರ್ತೇಶ್ ಕಾವಳೆ, ನಾಗರಾಜ್ ಕೋಲಕಾರ, ಗಣೇಶ್ ಗುಂಡೋಪ್, ರಾಜಶೇಖರ್ ಚೌಹಾಣ್, ಅಜಿತ್ ಸಿದ್ದಣ್ಣವರ್, ಸುನಿಲ್ ರಾವೂತ್, ಸುನಿಲ್ ಪವಾರ್, ಆಕಾಶ್ ಹುಲಿಯಾರ್, ಗಂಗಾಧರ್ ಎಂ ಮತ್ತು ಹೇಮಂತ್ ಹಾವಳ್ ಸೇರಿದಂತೆ ಹಲವು ಗಣ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ವಿಜೇತ ಕ್ರೀಡಾಪಟುಗಳ ಕಠಿಣ ಪರಿಶ್ರಮ ಮತ್ತು ದೇಶಕ್ಕೆ ತಂದ ಹೆಮ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

Related Articles

Leave a Reply

Your email address will not be published. Required fields are marked *

Back to top button