Uncategorized

ತಾಯಿ ಮೊಸಳೆ ಸೇರಿ ಸುಮಾರು 50 ಕ್ಕೂ ಹೆಚ್ಚು ಮೊಸಳೆ ಮರಿಗಳು ಪ್ರತ್ಯಕ್ಷ

ಎಲ್ಲೆಡೆ ಸಮರ್ಪಕವಾಗಿ ಮಳೆ ಆಗುತ್ತಿದ್ದರಿಂದ ಮೊಸಳೆ ಗಳು ಹಳ್ಳಗಳಲ್ಲಿ ಸಚರಿಸುತ್ತಿವೆ ಅದರಲ್ಲಿ ಪ್ರತ್ಯಕ್ಷ; ಗ್ರಾಮಸ್ಥರಿಂದ ಮೊಸಳೆ ಮರಿಗಳ ಸುರಕ್ಷಿತ ಸೆರೆ ಆಗಿದೆ.

ಹಳ್ಳದಲ್ಲಿ ತಾಯಿ ಮೊಸಳೆ ಸೇರಿ ಸುಮಾರು 50 ಕ್ಕೂ ಹೆಚ್ಚು ಮೊಸಳೆ ಮರಿಗಳು ಪ್ರತ್ಯಕ್ಷವಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದೇವರಡ್ಡೆರಟ್ಟಿ ಗ್ರಾಮದಲ್ಲಿ ನಡೆದಿದೆ.

ಹಲವು ದಿನಗಳಿಂದ ಗ್ರಾಮದ ಸಮೀಪದ ಅಪ್ಪಾಸಾಬ ಸತ್ಯಪ್ಪ ನಾಯಕ ಅವರ ತೋಟದ ಕೃಷಿ ಹೊಂಡದಲ್ಲಿ ಠಿಕಾನಿ ಹೂಡಿದ್ದ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತು. ಕೃಷಿಹೊಂಡದ ಸಮೀಪದ ಗದ್ದೆಯ ಬದುವಿನಲ್ಲಿ ಸುಮಾರು 50 ಕ್ಕೂ ಅಧಿಕ ಮೊಸಳೆ ಮರಿಗಳು ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದು, ತಾಯಿ ಮೊಸಳೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button