ಹಳ್ಳದಲ್ಲಿ ಸಿಲುಕಿದ್ದ ಮೂವರ ಸಮೇತ ನೂರಕ್ಕೂ ಹೆಚ್ಚು ಕುರಿಗಳ ರಕ್ಷಣೆ .

ಹುಬ್ಬಳ್ಳಿ: ಧಾರಾಕಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಹಳ್ಳದಲ್ಲಿ ಸಿಲುಕಿದ್ದ ಮೂವರ ಸಮೇತ ನೂರಕ್ಕೂ ಹೆಚ್ಚು ಕುರಿಗಳನ್ನ ರಕ್ಷಣೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಕಳೆದ ರಾತ್ರಿ ಸಂಭವಿಸಿದೆ.
ಬ್ಯಾಹಟ್ಟಿ ಕುಸುಗಲ್ ರಸ್ತೆಯಲ್ಲಿನ ದೊಡ್ಡಹಳ್ಳ ಮತ್ತು ಲಂಡ್ಯಾನ ಹಳ್ಳದಲ್ಲಿ ಹನಮಂತಪ್ಪ ಕಲ್ಲಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಸಿಲುಕಿದ್ದರು. ಅವರ ಜೊತೆಗೆ ನೂರಾರೂ ಕುರಿಗಳು ಇರುವುದು ಗೊತ್ತಾಗಿತ್ತು.
ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದ ಹಾಗೇ ರಾತ್ರೋರಾತ್ರಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ವಿನೋದ ಮುಕ್ತೆದಾರ, ತಹಶೀಲ್ದಾರ ಸೇರಿದಂತೆ ಹಲವರು ಬಂದಾಗ ಅವರ ಜೊತೆ ಟೊಂಕಕಟ್ಟಿ ಕಾರ್ಯಾಚರಣೆ ನಡೆಸಿದ್ದರಲ್ಲಿ ಗ್ರಾಪಂ ಸದಸ್ಯ ರೋಹಿತ ಮತ್ತಿಹಳ್ಳಿ ಪ್ರಮುಖರಾಗಿದ್ದರು.
ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನೂರಕ್ಕೂ ಹೆಚ್ಚು ಕುರಿಗಳ ಸಮೇತ ಮೂವರನ್ನೂ ಯಾವುದೇ ತೊಂದರೆಯಲ್ಲಿ ಸಿಲುಕದ ಹಾಗೇ ಹೊರಗೆ ತರಲಾಗಿದೆ.