
ಬೆಳಗಾವಿ :ಐಪಿಎಲ್ ಹಾಗೂ ಆರ್ ಆರ್ ತಂಡದಲ್ಲಿ ಅವಕಾಶ ಕೊಡುವುದಾಗಿ ಆಮಿಷ ಒಡ್ಡಿ ಬೆಳಗಾವಿ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ
ವಂಚಕರ ವಿರುದ್ಧ ಮೇ.17ರಂದು ಸಿಇಎನ್ ಠಾಣೆಗೆ ರಾಕೇಶ್ ಯಡೂರೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ್ ಜಿಲ್ಲೆಯ ಇಬ್ಬರು ಆರೋಪಿಗಳಾದ
ಸುಸಂಜನ್ ಮತ್ತು ದಿವಾಕರ್ನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ.
ರಾಕೇಶ ಹೈದರಾಬಾದಗೆ ಟ್ರೈಯಲ್ ಕೊಡಲು ಹೋದಾಗ ಕ್ರಿಕೆಟ್ ಆಡ್ತಿದ್ದ ರೀಲ್ಸ್ ಹಾಕಿದ್ದನು.ಇದನ್ನ ಗಮನಿಸಿ ರಾಕೇಶ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಸೈಬರ್ ವಂಚಕರು
ಬಳಿಕ ರಾಜಸ್ಥಾನ ತಂಡದಲ್ಲಿ ಅವಕಾಶ ಕೊಡಿಸುವುದಾಗಿ ಹಂತ ಹಂತವಾಗಿ 23 ಲಕ್ಷ ಪೀಕಿದ್ದ ಖದೀಮರು ಈಗ ಕಂಬಿ ಹಿಂದೆ ಬಿದ್ದಿದ್ದಾರೆ