Uncategorized
ಗುಳೇದಗುಡ್ಡ ಪಟ್ಟಣದಲ್ಲಿ ಸುರಿದ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ..

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗುಳೇದಗುಡ್ಡ ಪಟ್ಟಣದ ಪ್ರಮುಖ ರಸ್ತೆ ಯಲ್ಲಿ ಹರಿದು ಬಂದ ನೀರಿನಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು
ನೀರು ತುಂಬಿ ಹರಿಯುತ್ತಿರುವುದರಿಂದ ಪರ್ವತಿ ಗ್ರಾಮಕ್ಕೆ ಸಂಚಾರಿಸುವ ಸೇತುವೆ ಬಂದಾಗಿದೆ ಪೆಟ್ರೋಲ್ ಬಂಕ್,ಹೋಟೆಲ್ ಗಳಲ್ಲಿ ನುಗ್ಗಿದ ನೀರು
ಗ್ರಾಮಸ್ಥರಿಗೆ ಹಾಗೂ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದೆ
ಗುಳೇದಗುಡ್ಡ ಪಟ್ಟಣ ಪಕ್ಕದಲ್ಲಿಯೇ ಮಲ್ಲಪ್ರಭಾ ನದಿ ಹರಿಯುತ್ತಿದ್ದು,ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ