Uncategorized
: ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಹುಸೇನಸಾಬ ಕುಟುಂಬಸ್ಥರಿಗೆ ಸಾಂತ್ವನ ಸಚಿವ ಸಂತೋಷ್ ಲಾಡ್

ಇಂದು ಹಳೇಹುಬ್ಬಳ್ಳಿಯ ಬೀರಬಂದ ಓಣಿಯ ನಿವಾಸಿ ದಿ. ಹುಸೇನಸಾಬ ಕಳಸ ಅವರ ಮನೆಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಸರಕಾರದ ಪರಿಹಾರ ಧನದ ಆದೇಶ ಪ್ರತಿಯನ್ನು ಸಚಿವರು ಕುಟುಂಬಸ್ಥರಿಗೆ ವಿತರಿಸಿದರು. ಹೊಲದಿಂದ ಮನೆಗೆ ಹಿಂತಿರುಗುವಾಗ ಸುರಿದ ಅಪಾರ ಪ್ರಮಾಣದ ಮಳೆಗೆ ಹುಸೇನಸಾಬ ಅವರು ಕೊಚ್ಚಿ ಹೋಗಿದ್ದರು. ನಿನ್ನೆ ದಿನ ಮೃತರ ದೇಹ ಪತ್ತೆಯಾಗಿತ್ತು.
ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಶಹರ ತಹಶಿಲ್ದಾರ ಕೆ.ಆರ್.ಪಾಟೀಲ, ಉಪಸ್ಥಿತರಿದ್ದರು.