ಚಿಕ್ಕೋಡಿಬೆಳಗಾವಿರಾಜ್ಯ

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿ: ಕಠಿಣವಾದ ಪರಿಶ್ರಮ,ಶ್ರಧ್ದೆಯಿಂದ ಕಾಯಕದಲ್ಲಿ ತೋಡಗಿದರೆ ಯಶಸ್ಸು ನಿಶ್ಚಿತ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ‌ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ‌ಅತೀ ಹೆಚ್ಚು ಅಂಕ ಪಡೆದ ಚಿಕ್ಕೋಡಿ ‌ಶೈಕ್ಷಣಿಕ ಜಿಲ್ಲಾ ಮಟ್ಟದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದಿಸಿ ಅವರು ಮಾತನಾಡಿದರು.ಮುಂದಿನ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಚರ್ಚೆಸಿ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು‌.ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಬೇಕು.ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನದ ಯೋಜನೆಗಳು ಲಭ್ಯವಿದ್ದು ಅದರ ಲಾಭವನ್ನು ಪಡೆದುಕೊಳ್ಳಬೇಕು.ಓದುವ ಹವ್ಯಾಸ ನಿರಂತರವಾಗಿರಬೇಕು.ತಂದೆ ಸತೀಶ ಜಾರಕಿಹೊಳಿಯವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಹಾಗೂ ೫ ಕ್ಕೂ ಹೆಚ್ಚು ಕಡೆಗಳಲ್ಲಿ ಕೋಚಿಂಗ್ ಸೆಂಟರ್ ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಶಿಸ್ತು,ಸಮಯ,ಕಠಿಣವಾದ ಪರಿಶ್ರಮ ಇದ್ರೆ ಸಂಕಲ್ಪದಂತೆ ಗುರಿ ಮುಟ್ಟಲು‌ ಸಾಧ್ಯ. ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು.ಶಿಕ್ಷಣಕ್ಕೆ ಯಾವತ್ತು ನಾನು ಪ್ರೊತ್ಸಾಹ ನೀಡುತ್ತಿದೇನೆ‌‌‌.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಾರ್ಯ ಪ್ರಶಂಸನೀಯ ಎಂದರು.ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಅದರೆ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಉಪವಿಭಾಗಧಿಕಾರಿ ಸುಭಾಷ ಸಂಪಗಾವಿಯವರು ಮಾತನಾಡಿ ಶಿಕ್ಷಣದಲ್ಲಿ ಅಗಾಧವಾದ ಶಕ್ತಿ ಇದೆ.ಶಿಕ್ಷಣ ಪಡೆದರೆ ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ.ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.ಇದರ ಲಾಭವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ,ಜಿಲ್ಲಾ ಸಮಾಜ ಕಲ್ಯಾಣ‌ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ,ಡಿಡಿಪಿಯು ಪಾಂಡುರಂಗ ಭಂಡಾರಿ,ಡಿಡಿಪಿಐ ಆರ್.ಎಸ್.ಸೀತಾರಾಮು,ಉಪನ್ಯಾಸಕ ವಿಶ್ವನಾಥ ಚೌಗಲಾ,ರಾಜು ಕೋಟಗಿ,ಅರ್ಜುನ ನಾಯಿಕವಾಡಿ,ರಾಮಕೃಷ್ಣ ಪಾನಗೂಡೆ,ಶಿವಾನಂದ ಮಯ್ರಾಯಿ ಸೇರಿದಂತೆ ‌ಇನ್ನಿತರರು ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button