Uncategorized

ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿ ಬಲಗೈ ಕಳೆದುಕೊಂಡಿದ್ದ ಯೋಧನ ನಿವೃತ್ತಿ ಗೋಕಾಕ ತಾಲೂಕಿನಲ್ಲಿ ಯೋಧನಿಗೆ ಅದ್ಧೂರಿ ಸನ್ಮಾನ

ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿ ಬಲಗೈ ಕಳೆದುಕೊಂಡಿದ್ದ ಯೋಧನ ನಿವೃತ್ತಿ
ಗೋಕಾಕ ತಾಲೂಕಿನಲ್ಲಿ ಯೋಧನಿಗೆ ಅದ್ಧೂರಿ ಸನ್ಮಾನ

ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯೂ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಭಾಗಿಯಾಗಿ ಬಲಗೈ ಕಳೆದುಕೊಂಡು ಇಂದು ನಿವೃತ್ತಿ ಹೊಂದಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿಗೆ ಮರಳಿದ ಯೋಧನನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಇತ್ತಿಚೆಗೆ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯೂ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಭಾಗಿಯಾಗಿ ಬಲಗೈ ಕಳೆದುಕೊಂಡು ಇಂದು ನಿವೃತ್ತಿ ಹೊಂದಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆನಚನಮರಡಿ ಗ್ರಾಮದ ಯೋಧ ಈರಣ್ಣ ಜನಕಟ್ಟಿ ಅವರನ್ನು ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಮಿತ್ರ ಸಂಘಟನೆಯಾದ ಗೋಕಾಕನ ಮಾಜಿ ಸೈನಿಕರ ಸಂಘದ ವತಿಯಿಂದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.

ಎಂ.ಎಲ್.ಐ.ಆರ್.ಸಿಯಲ್ಲಿ 9 ವರ್ಷ ಸೇರಿದಂತೆ ಒಟ್ಟು 16 ವರ್ಷ ಸೇವೆ ಸಲ್ಲಿಸಿದ ಯೋಧ
ಈರಣ್ಣ ಜನಕಟ್ಟಿ ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ಧರು. ಈ ವೇಳೆ ಅವರ ಜೊತೆಗಿದ್ದ 7 ಜನ ಯೋಧರ ಹುತಾತ್ಮರಾಗಿದ್ದು, ಇವರು ತಮ್ಮ ಬಲಗೈ ಕಳೆದುಕೊಂಡಿದ್ದಾರೆ. ಸನ್ಮಾನ ಸಮಾರಂಭದ ವೇಳೆ ಮಾಜಿ ಸೈನಿಕರ ಸಂಘ ಅಧ್ಯಕ್ಷರಾದ ಫಕೀರಪ್ಪ ಗೌಡರ್ ಹಾಗೂ ಪದಾಧಿಕಾರಿಗಳು ಸದಸ್ಯರು ಇನ್ನುಳಿದವರು ಉಪಸ್ಥಿತರಿದ್ಧರು.

Related Articles

Leave a Reply

Your email address will not be published. Required fields are marked *

Back to top button