ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ; ಜಿ.ಎಸ್. ಪಾಟೀಲ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ

ನೀರು, ಗಾಳಿ, ಭೂಮಿ, ಗುಡ್ಡ, ಬೆಟ್ಟಗಳು, ವನ್ಯಜೀವಿಗಳು ಪರಿಸರದ ಸಂರಕ್ಷಕಗಳು. ಅವುಗಳ ಶುಚಿತ್ವ ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲೆಂದರಲ್ಲಿ ಕಸ,ಕಡ್ಡಿಗಳನ್ನು ಎಸೆಯುವದು, ಮಲಿನತೆಗೊಳಿಸಿ ಪರಿಸರಕ್ಕೆ ಧಕ್ಕೆ ಮಾಡುವದು ಅನಾಗರಿಕತನದ ಅನಾವರಣ ಎಂದು ಪರಿಸರ ಪ್ರೇಮಿ, ಬೆಳಗಾವಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಜಿ ಎಸ್ ಪಾಟೀಲ ಹೇಳಿದರು.
ಧರ್ಮ ಪತ್ನಿ ನಿತ್ಯಮಂಗಲ ರೊಂದಿಗೆ ಆಗಮಿಸಿದ್ದ ಅವರು ಶನಿವಾರ ಬೆಳಗಾವಿ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದ ಸನ್ನಿಧಿಗೆ ಆರತಿ ಪೂಜೆ ಸಲ್ಲಿಸಿ ಟ್ರಸ್ಟ್ ಕಮೀಟಿಯ ವತಿಯಿಂದ ಸನ್ಮಾನ ಪಡೆದು ಮಾತನಾಡಿದರು.
ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ಸಾಲದು. ಅವುಗಳ ಪೋಷಿಸುವ ಹೊಣೆಗಾರಿಕೆ ನಮ್ಮದಾದಾಗ ಈ ಪರಿಸರ ಮತ್ತು ವನ್ಯ ಸಂಕುಲದಲ್ಲಿ ಸಂತಸ ಕಾಣಬಹುದಾಗಿದೆ. ಪರಿಸರ ಅಭಿವ್ರದ್ಧಿಗೆ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸುವದಾಗಬೇಕು , ಅರಣ್ಯದಲ್ಲಿ ವನ್ಯಜೀವಿ ಸಂಕುಲ ಸಂತಸದಿದ್ದರೆ ಮಾತ್ರ ಆ ಪರಿಸರ ಚೆನ್ನ ಎಂದರಲ್ಲದೆ, ಇಂಥ ದಿಸೆಯಲ್ಲಿ ಸ್ನೇಹ ಸಮಾಜ ಸೇವಾ ಸಂಘದ ಸಮಾಜಪರ ಮತ್ತು ಪರಿಸರ ಕಾಳಜಿ ನಿಜಕ್ಕೂ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದರಲ್ಲದೆ, ಸನ್ಮಾನಿಸಿದ್ದಕ್ಕೆ ಧನ್ಯವಾದ ಹೇಳಿದರು.
ಸಂಘದ ಅಧ್ಯಕ್ಷರಾದ ಸುರೇಶ ಉರಬಿನಟ್ಟಿ ಜಿ ಎಸ್ ಪಾಟೀಲ ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆಯಿಂದಾಗಿ ಜನ,ಮನದಲ್ಲಿ ಶಾಶ್ವತ ನೆಲೆ ನಿಂತವರು ಪರಿಸರ ಪ್ರೀ ಯರಾದ ಅವರು ಕೊಡುವ ಸಲಹೆ, ಸೂಚನೆಗಳು ನಮ್ಮ ಸಂಘಕ್ಕೆ ಸದಾ ಶ್ರೀರಕ್ಷೆಯಾಗಿದೆ ಎಂದರಲ್ಲದೆ, ದಂಪತಿಗಳನ್ನು ಕಮಿಟಿ ಪರ ಸನ್ಮಾನಿಸಿ ಅಭಿನಂದಿಸಿದರು.
ಮಲ್ಹಾರ ದಿಕ್ಷಿತ್ ಮತ್ತು ಹನುಮಾನ ಭಕ್ತರು ಸನ್ನಿಧಿಗೆ ಹನುಮಾನ ಚಾಲೀಸಾ ಪಠನೆ ಮಾಡಿದರು. ಆರ್ಚಕರಾದ ಪ್ರಕಾಶ ದೀಕ್ಷಿತ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಂಜುನಾಥ ಪಾಟೀಲ, ಖಜಾಂಚಿ ಮನೋಹರ ಕಾಜಗಾರ, ಸದಸ್ಯರಾದ ಮಹಾದೇವ ಟೊಣ್ಣೆ, ಎಸ್ ಎಲ್ ಸನದಿ, ಜಿ ಜಿ ಹುನ್ನೂರ, ಎನ್ ಬಿ ಹಣ್ಣಿಕೇರಿ, ಶಿವಾನಂದ ಮಠಪತಿ, ಚಂದ್ರಶೇಖರ ಖನಗಣ್ಣಿ, ಬಸವರಾಜ ಹಿರೇಮಠ ಸೇರಿದಂತೆ ಪ್ರಸಾದ ಸೇವೆಗೈದ. ಶ್ರೀ ದೇವಿ ಪ್ರಸಾದ ಹೋಟೆಲ್ ಸಿಬ್ಬಂದಿ, ಶ್ರೀ ದುರ್ಗಾ ಹೋಟೆಲ್ ನ ಮಂಜುನಾಥ ನಾಯರಿ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಪಲ್ಲವಿ ಪಾಟೀಲ, ಸುಜಾತಾ ಜುಟ್ಟನ್ನವರ, ಕಾವ್ಯಾ ಚಿಟಗಿ, ಶಶಿರೇಖಾ ನಾಯರ್, ಸುಮಂಗಲಾ ತೋಂಟಾಪೂರ ಮತ್ತು ಆಂಜನೇಯ ಸ್ವಾಮಿ ಭಕ್ತರು,
ಮಹಿಳೆಯರು, ಮಕ್ಕಳು ಉಪಸ್ತಿತರಿದ್ದರು.