ಬಿಜಾಪುರ

ಮಳೆಯಿಂದ ಹಾನಿ; ವಸತಿ, ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಆಕ್ರೋಶ

ವಿಜಯಪುರ;  ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಇತ್ತೀಚಿನ ಸುರಿದ ಭಾರಿ ಮಳೆಗೆ ಲಕ್ಷ್ಮೀನಗರದ ಪಕ್ಕದ ಜಮೀನಿನ ಒಡ್ಡು ಒಡೆದು ಮನೆಯೊಳಗೆ ನೀರು ನುಗ್ಗಿ ಜನರು ರಾತ್ರಿಯಿಡಿ ಪರದಾಡುವಂತಾಗಿತ್ತು.
ಹೀಗಾಗಿ, ತಮಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನಿವಾಸಿಗಳು ಅಂಬೇಡ್ಕರ ವೃತ್ತದಲ್ಲಿ ದಿಢೀ‌ರ್ ರಸ್ತೆ ತಡೆದು ಧರಣಿ ನಡೆಸಿದರು. ಪ್ರತಿಭಟನೆ ನಿರತರರು ವಿವಿಧ ಮನೆಯಲ್ಲಿನ ಸಾಮಗ್ರಿ ಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಾಮಗ್ರಿಗಳು ತೇಲಿ ಹೋಗಿವೆ. ಮನೆಗಳು ವಾಸ ಮಾಡಲು ಅಸ್ತವ್ಯಸ್ಥವಾಗಿವೆ. ಕೂಡಲೇ ಅಧಿಕಾರಿಗಳು ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಧರಣಿ ಸ್ಥಳಕ್ಕೆ ತಹಸೀಲ್ದಾರ್ ವೈ, ಎಸ್.ಸೋಮನಕಟ್ಟಿ, ಜಿಲ್ಲಾ ಯೋಜನಾ ನಿರ್ದೇಶಕ
ತಾಲೂಕಿನ ವಿಪತ್ತು ನಿರ್ವಾಹಣಾ ನೋಡಲ್ ಅಧಿಕಾರಿ ಬಿ.ಎ.ಸೌದಾಗರ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿದ ಮನವೊಲಿಕೆ ಮಾಡಿದರು. ಆನಂತರ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ನೀಲು ನಾಯಕ, ಪರಶುರಾಮ ಆಡಗಿಮನಿ, ಹನುಮಂತ ಕಾಮನಕೇರಿ ರಾಜು ಮುಳವಾಡ, ರಮೇಶ ಇಂಗಳೇಶ್ವರ, ಸಿದ್ದಪ್ಪ ಪೈಠಾಣ, , ಲಕ್ಷ್ಮಣ ಅಂಬಿಗೇರ, ಶ್ರೀಶೈಲ ಕುಂಬಾರ, ಬಸವರಾಜ ಜಾಡರ, , ಅನಿತಾ ಅಂಬಿಗೇರ, ಅನೇಕ ಜನ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button