ಶೇ.15ರಷ್ಟು ಪ್ರಯಾಣ ದರ ಹೆಚ್ಚಳ ಯಾವ ಊರಿಗೆ ಎಷ್ಟೀದೆ ಬಸ್ ಚಾರ್ಜ..?

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು ಮಧ್ಯರಾತ್ರಿಯಿಂದ ಶೇ 15ರಷ್ಟು ಟಿಕೆಟ್ ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ.
ಹೀಗಿದೆ ಬಸ್ ಪ್ರಯಾಣದ ದರ ಏರಿಕೆಯ ಪಟ್ಟಿ: ಈ ಸಂಬಂಧ ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್ಗಳ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಟಿಕೆಟ್ ದರ ಪಟ್ಟಿಯಂತೆ
ಪರಿಷ್ಕೃತ ದರ ಪಟ್ಟಿ:
ಬೆಂಗಳೂರಿನಿಂದ ತುಮಕೂರು ಪ್ರಯಾಣ ದರ 80 ನಿಂದ 91 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಮಂಡ್ಯಗೆ ಪ್ರಯಾಣ ದರ 116 ನಿಂದ 131 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಮಂಗಳೂರು ಟಿಕೆಟ್ ದರ 454 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಹಾಸನ ಟಿಕೆಟ್ ದರ 246 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರು-ಮೈಸೂರು ಟಿಕೆಟ್ ದರ 162 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರು – ಬೆಳಗಾವಿ ಟಿಕೆಟ್ ದರ 697 ರೂ.ಗೆ ಏರಿಕೆ
ಯಾಗಿದೆ.
ಬೆಂಗಳೂರು – ಹುಬ್ಬಳ್ಳಿ
ಟಿಕೆಟ್ ದರ 563 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಹಾವೇರಿ
ಟಿಕೆಟ್ ದರ 474 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರು-ಕಲಬುರಗಿ
ಟಿಕೆಟ್ ದರ 805 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರು-ಶಿವಮೊಗ್ಗ
ಟಿಕೆಟ್ ದರ 356 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಬಳ್ಳಾರಿ
ಟಿಕೆಟ್ ದರ 424 ರೂ.ಗೆ ಏರಿಕೆಯಾಗಿದೆ.