ಧಾರವಾಡ

ಮೂರ್ತಿ ಪ್ರತಿಷ್ಠಾನ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಮುತಾಲಿಕ ಒತ್ತಾಯ..

ಇತ್ತೀಚೆಗೆ ಕಳೆದ 10 ದಿನಗಳ ಹಿಂದೆ ಧಾರವಾಡದ ಕೃಷಿ ವಿವಿ ಜಮೀನಿನಲ್ಲಿ ಅಪರಿಚಿತರಿಂದ ಶ್ರೀ ಅಯ್ಯಪ್ಪ‌ಸ್ವಾಮಿ ಹಾಗೂ ನಾಗದೇವರ ಮೂರ್ತಿ ಪ್ರತಿಷ್ಠಾನಗೊಂಡ ಸ್ಥಳದಲ್ಲಿ‌ ಅಯ್ಯಪ್ಪ ಭಕ್ತರು ಮೂರ್ತಿಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ದು, ಪೂಜೆಯಲ್ಲಿ ಶ್ರೀ ರಾಮ ಸೇನೆ ಸಂಘಟನೆ ಮುಖ್ಯಸ್ಥರಾದ ಪ್ರಮೋದ ಮುತಾಲಿಕ ಭಾಗವಹಿಸಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ನಗರದ ಧಾರವಾಡ ಬೆಳಗಾವಿ ರಸ್ತೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ಜಮೀನಿನಲ್ಲಿ ಸ್ಥಾಪನೆಗೊಂಡ ಮೂರ್ತಿಗಳ‌ ಸ್ಥಳಗಳಲ್ಲಿ, ಶ್ರೀ ಅಯ್ಯಪ್ಪ‌ ಮಾಲಾಧಾರಿಗಳು ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಹಾಗೂ ನಾಗ ಮೂರ್ತಿಗೆ ಪೂಜೆ ಸಲ್ಲಿಸಿದರು. ಜತೆಗೆ ಬಂದಂತಹ‌ ಭಕ್ತರಿಗೆ ಅನ್ನಪ್ರಸಾದ್ ಕೂಡಾ ಮಾಡಲಾಗಿದ್ದು, ಪ್ರಸಾದ ಸೇವಿಸಿ ಭಕ್ತರ ದೇವರ ಕೃಪೆಗೆ ಪಾತ್ರರಾದರು. ‌‌ಇನ್ನೂ ಪೂಜೆ ಕಾರ್ಯದಲ್ಲಿ ಭಾಗಿಯಾದ ಬಳಿಕ ಮಾತಾನಾಡಿದ ಶ್ರೀ ರಾಮ‌ಸೇನೆ ಸಂಘಟನೆ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ‌ ಅವರು, ಕೃಷಿ ವಿವಿ ಆವರಣದಲ್ಲಿ ಅಯ್ಯಪ್ಪ ಪವಾಡ ಸದೃಶವಾಗಿ ಪ್ರತಿಷ್ಠನಗೊಂಡಿದೆ. ಅದು ಪವಾಡವೋ ಅಥವಾ ಉದ್ಙವವೋ, ಆದರೆ ಪ್ರತಿಷ್ಠವಾಗಿದೆ. ಈ ದಾರಿಯಲ್ಲಿ ಸುಮಾರು ೧೦೦ ಕಿಲೋಮೀಟರ್ ಅಂತರದಲ್ಲಿ ಭಕ್ತರಿಗೆ ಸ್ನಾನಕ್ಕೆ, ಪೂಜೆಗೆ ವ್ಯವಸ್ಥೆ ಇರಲಿಲ್ಲ, ಎಲ್ಲೋ‌ಕೆರೆ ಭಾವಿಯನ್ನು

ಅಯ್ಯಪ್ಪ‌ಮಾಲಾಧಾರಿಗಳು ಹುಡುಕಬೇಕಾದ ಸ್ಥಿತಿ ಇದೆ. ಅಯ್ಯಪ್ಪ ಕೃಪೆಯಿಂದ ಭಕ್ತಾದಿಗಳಿಗೆ ಸನ್ನಿಧಿ ಪ್ರಕಟ ಆಗಿದೆ. ೨೫ ಸಾವಿರ ಭಕ್ತರು ಇಲ್ಲಿ ಬಂದಿದ್ದಾರೆ, ಅವರೆಲ್ಲಾ ಇದರ ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ. ಇವತ್ತು ಧಾರವಾಡ ನಗರದ ಎಲ್ಲ ಮಾಲಾಧಾರಿಗಳು ಪೂಜೆಗೆ ಬರಲು ಹೇಳಿದ್ರು, ಅದರಂತೆ ಸಾವಿರಾರು‌ ಜನ ಬಂದಿದ್ದಾರೆ, ಯಾವುದೇ ಅಡ್ಡಿ ಇಲ್ಲದೇ ಇಲ್ಲಿ ಭವ್ಯ ದೇವಸ್ಥಾನ ಆಗಲಿದೆ. ಸರ್ಕಾರ ಕೂಡಾ ಇದಕ್ಕೆ ಅನುಕೂಲ ಮಾಡಿ ಕೊಡಬೇಕು. ಇದಕ್ಕೆ ವಿರೋಧ ಮಾಡದೇ ಯಾವುದೇ ರೀತಿಯ ವಿಕೃತ ಮನಸ್ಸಿನಿಂದ ಇದನ್ನ ತೆಗೆಯಲು ಪ್ರಯತ್ನ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಸಮಾಜದ ವಿರೋಧ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ‌

 

Related Articles

Leave a Reply

Your email address will not be published. Required fields are marked *

Back to top button