Uncategorized

ಶಿವಶಕ್ತಿ ಸಕ್ಕರೆ ಕಾರ್ಖಾನೆ, ಉಗಾರ್ ಶುಗರ್ಸ ವರ್ಕ್, ಕೆಂಪವಾಡ್ ಶುಗರ್ಸ,, ಶೀರುಗುಪ್ಪಿ ಸಕ್ಕರೆ ಕಾರ್ಖಾನೆಗಳಿಗೆ ಪ್ರಸಕ್ತ ಕಬ್ಬುನುರಿಸುವ ಹಂಗಾಮಿನಲ್ಲಿ ಸಮರ್ಪಕ ದೂರ ನೀಡಲು ಬೈಕ್ ಗಳ ರೆಲಿ ಮುಖಾಂತರ ತರಳಿ ಮನವಿ

ಮಾಜಿ ಸಂಸದ ಸ್ವಾಭಿಮಾನಿ ರೈತ ಸಂಘದ ಸಂಸ್ಥಾಪಕ ರಾಜು ಶೆಟ್ಟಿ ಮಂಗಳವಾರ ಬೆಳಗೆ ಕಾಗವಾಡದಲ್ಲಿ.

ಮಾಜಿ ಸಂಸದರು ಹಾಗೂ ಸ್ವಾಭಿಮಾನಿ ರಯತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಜು ಶೆಟ್ಟಿ ಇವರೊಂದಿಗೆ ಸಾವಿರಾರು ರೈತರು ಬೈಕ್ಗಳ ಮುಖಾಂತರ ಮಂಗಳವಾರ ಬೆಳಿಗ್ಗೆಯಿಂದ ಚಿಕ್ಕೋಡಿಯ ಶಿವಶಕ್ತಿ ಸಕ್ಕರೆ ಕಾರ್ಖಾನೆ, ಉಗಾರ್ ಶುಗರ್ಸ ವರ್ಕ್, ಕೆಂಪವಾಡ್ ಶುಗರ್ಸ,, ಶೀರುಗುಪ್ಪಿ ಸಕ್ಕರೆ ಕಾರ್ಖಾನೆಗಳಿಗೆ ಪ್ರಸಕ್ತ ಕಬ್ಬುನುರಿಸುವ ಹಂಗಾಮಿನಲ್ಲಿ ಸಮರ್ಪಕ ದೂರ ನೀಡಲು ಬೈಕ್ ಗಳ ರೆಲಿ ಮುಖಾಂತರ ತರಳಿ ಮನವಿ ಅರ್ಪಿಸಲಿದ್ದಾರೆ.

ಮಂಗಳವಾರ ಬೆಳಿಗ್ಗೆ 9:00ಯಿಂದ ಬೈಕ್ ರೇಲಿ ಪ್ರಾರಂಭವಾಗಲಿದೆ. ಮಾಜಿ ಸಂಸದ ರಾಜು ಶೆಟ್ಟಿ ಇವರು ಖುದ್ದಾಗಿ ಬೈಕ್ಗಗಳ ಮುಖಾಂತರ ರವಾನಿಸಲಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹರಿದುಹೋಗುವ ಕೃಷ್ಣಾ ನದಿಯ ಒಂದೇ, ನೀರು, ಒಂದೇ, ಜಮೀನುಗಳು ಒಂದೇ, ಆದರೆ ಇಲ್ಲಿಗೆ ಬೆಳೆದ ಕಬ್ಬಿನ ದರ ಮಹಾರಾಷ್ಟ್ರದಲ್ಲಿ ಸಾಗಿಸಿದರೆ ಬೇರೆದರ ಕರ್ನಾಟಕದಲ್ಲಿ ಸಾಗಿಸಿದರೆ ಬೇರೆ ದರ ಈ ತಾರತಮ್ಯಾಕೆ ಇದನ್ನು ಪರೀಕ್ಷಿಸಲು ಖುದ್ದಾಗಿ ರೈತ ಸಂಘಟನೆಯ ಸಂಸ್ಥಾಪಕರು ಆಗಮಿಸಿ ಎಲ್ಲ ರೈತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಿದ್ದಾರೆ,

ಎಲ್ಲಾ ರೈತರು ತಮ್ಮ ಬಾಯಕೆಗಳನ್ನು ತೆಗೆದುಕೊಂಡು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಆದೇಶ ಇದ್ದಿದ್ದರಿಂದ ಇದನ್ನು ತೆಗೆದುಕೊಂಡು ಬರಬೇಕೆಂದು ಕಾಗವಾಡ ರೈತ ಸಂಘಟನೆಯ ಪ್ರಮುಖರು ನಿವೃತ್ತ ಮುಖ್ಯ ಅಧ್ಯಾಪಕ ಎಂ ಬಿ ಉದ್ಗಾವೆ ಆಹ್ವಾನಿಸಿದ್ದಾರೆ.

ರೈತರಿಗೆ ಬೆನ್ನಲುವಾಗಿ ಉಳಿದ ಸ್ವಾಭಿಮಾನಿ ರೈತ ಸಂಘಟನೆ ಅಧ್ಯಕ್ಷ ರಾಜು ಶೆಟ್ಟಿ ಇವರು ಕರ್ನಾಟಕದ ರೈತರಿಗೆ ಸಮರ್ಪಕವಾಗಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ಬಿಲ್ ನೀಡಲು ಮಂಗಳವಾರ ಬೆಳಿಗ್ಗೆ ಕಾಗವಾಡದಲ್ಲಿ ಆಗಮಿಸಲಿದ್ದು ಯಾವ ರೈತರು ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಬದಿಗಿಟ್ಟು ಅವರಿಗೆ ಕೈಜೋಡಿಸೋಣ ಎಂದು ಸ್ವಾಭಿಮಾನಿ ರೈತ ಸಂಘಟನೆಯ ಕಾಗವಾಡ ಘಟಕ ಪ್ರಮುಖ ಅಜಿತ್ ಕರು ಕರೆ ನೀಡಿದರು.

ಸೋಮವಾರ ಬೆಳಗ್ಗೆ ಕಾಗವಾಡದ ಬಜಾರ್ ಪೇಟದಲ್ಲಿ ಎಲ್ಲ ರೈತರು ಒಂದುಗೂಡಿ ಮಾಜಿ ಸಂಸದ ರಾಜು ಶೆಟ್ಟಿ ಇವರ ಆಗಮನಕ್ಕೆ ಸ್ವಾಗತಿಸಿ ಸಾವಿರಾರು ಬಾಯಿಕಗೆಳನು ತೆಗೆದುಕೊಂಡು ಎಲ್ಲ ರೈತರು ,ಯುವಕರು ಒಂದುಗೂಡಿ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸಮರ್ಪಕವಾಗಿ ಧರಣಿ ನೀಡಲು ರಾಲಿಯಲ್ಲಿ ಒಂದುಗೂಡು ಎಂದು ಶಪಥ ಮಾಡಿದರು. .
ಬೈಟ್

ಕಾಗವಾಡದಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ಮುಖಂಡರಾದ ಅಜಿತ್ ಕರವ, ಸುನಿಲ್ ಮಾಲಗಾವೆ, ಸಚಿನ್ ಕೌಟಿಗೆ ಅಭಯ ಕರೋಲೆ ಸುರೇಶ್ ಪಾಟೀಲ್, ಅಮರ ಹಿಂದೆ, ಶಾಂತಿನಾಥ್ ಕರವ, ರಾಜು ಚಿಂಚೋಡೆ, ಕಾಕಾಸಾಬ್ ಚೌಗೂಲೆ, ಶೀತಲ್ ಹೇರಲೇಖರ್, ಮಹಾವೀರ್ ಕರವ ಗೋರೆಟು ದರುರ, ಅಶೋಕ್ ಕ ಕುಡುಚಿ, ಅಜಿತ್ ಮಗದುಮ್ , ನಿವೃತ್ತ ಪ್ರಾಚಾರ್ಯ ಭೀಮ ಪಾಟೀಲ್ ,ಸುರೇಶ್ ಕವಟಗಿ,ಮುಂತಾದ ರೈತ ಮುಖಂಡರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button