ಬೆಳಗಾವಿ

ಅನಗೋಳದಲ್ಲಿ ಜೈ ಮಹಾರಾಷ್ಟ್ರ ಘೋಷನೆ…ಶಾಸಕರು, ಮಹಾಪೌರರ ವಿರುದ್ಧ ಕೇಸ್ ದಾಖಲಿಸಿದ ಕರವೇ…

ಬೆಳಗಾವಿ: ಅನಗೋಳದಲ್ಲಿ ಕನ್ನಡಿಗರ ತೆರಿಗೆಯ ಹಣದಲ್ಲಿ ಛತ್ರಪತಿ ಸಂಭಾಜೀ ಮಹಾರಾಜರ ಮೂರ್ತಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ನೆರೆಯ ಮಹಾರಾಷ್ಟ್ರದ ಸಚಿವರನ್ನು ಕರೆಯಿಸಿ ಜೈ ಮಹಾರಾಷ್ಟ್ರ ಎಂಬ ಘೋಷಣೆಗಳನ್ನು ಕೂಗಿಸಿದ ಬೆಳಗಾವಿ ದಕ್ಷಿಣ ಶಾಸಕರು, ಮಹಾಪೌರರು ಮತ್ತು ಉಪಮಹಾಪೌರರು ಸೇರಿದಂತೆ ನಗರಸೇವಕರ ಸದಸ್ಯತ್ವವನ್ನು ರದ್ಧುಗೊಳಿಸಿ ಪಾಲಿಕೆಯನ್ನು ಸೂಪರಸೀಡ್ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ನಡೆಸಿದೆ.

ಬೆಳಗಾವಿಯ ಅನಗೋಳದಲ್ಲಿ ಕನ್ನಡಿಗರ ತೆರಿಗೆಯ ಹಣದಲ್ಲಿ ಛತ್ರಪತಿ ಸಂಭಾಜೀ ಮಹಾರಾಜರ ಮೂರ್ತಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ನೆರೆಯ ಮಹಾರಾಷ್ಟ್ರದ ಸಚಿವರನ್ನು ಕರೆಯಿಸಿ ಜೈ ಮಹಾರಾಷ್ಟ್ರ ಎಂಬ ಘೋಷಣೆಗಳನ್ನು ಕೂಗಿಸಿದ ಬೆಳಗಾವಿ ದಕ್ಷಿಣ ಶಾಸಕರು, ಮಹಾಪೌರರು ಮತ್ತು ಉಪಮಹಾಪೌರರು ಸೇರಿದಂತೆ ನಗರಸೇವಕರ ವಿರುದ್ಧ ಬೆಳಗಾವಿಯ ಟಿಳಕವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಅವರಿಗೆ ಮನವಿಯಲ್ಲಿ ಸಲ್ಲಿಸಿತು. 

ಈ ವೇಳೆ ಮಾತನಾಡಿದ ದೀಪಕ ಗುಡಗನಟ್ಟಿ, ಅನಗೋಳದಲ್ಲಿ ಕನ್ನಡಿಗರ ತೆರಿಗೆಯ ಹಣದಲ್ಲಿ ಛತ್ರಪತಿ ಸಂಭಾಜೀ ಮಹಾರಾಜರ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ನೆರೆಯ ಮಹಾರಾಷ್ಟ್ರದ ಸಚಿವರನ್ನು ಕರೆಯಿಸಿ ಜೈ ಮಹಾರಾಷ್ಟ್ರ ಎಂಬ ಘೋಷಣೆಗಳನ್ನು ಕೂಗಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಇದನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್, ಮಹಾಪೌರ ಸವೀತಾ ಕಾಂಬಳೆ, ಉಪಮಹಾಪೌರ ಆನಂದ ಚವ್ಹಾಣ ಮತ್ತು ನಗರಸೇವಕರ ಸದಸ್ಯತ್ವವನ್ನು ರದ್ಧುಗೊಳಿಸಬೇಕು. ಅವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಬೇಕು. ಸರ್ಕಾರ ಈ ಪ್ರಕರಣದ ಗಂಭೀರತೆಯನ್ನು ಅರಿತು ಮಹಾಪಾಲಿಕೆಯನ್ನು ವಿಸರ್ಜನೆ ಮಾಡಬೇಕೆಂದು ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ಧರು.

Related Articles

Leave a Reply

Your email address will not be published. Required fields are marked *

Back to top button