ಬೆಳಗಾವಿ
ಶಹಾಪೂರದಲ್ಲಿ ಶ್ರೀ ದುರ್ಗಾ-ಶ್ರೀ ಮಾತಂಗಿ ದೇವಿಯ ಜಾತ್ರೋತ್ಸವ ; ನೂರಾರು ಸುಮಂಗಲಿಯರಿಂದ ಉಡಿ ತುಂಬುವ ಕಾರ್ಯಕ್ರಮ

ಬೆಳಗಾವಿಯ ಶಹಾಪೂರದ ಗಾಡೆ ಮಾರ್ಗ, ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಯಾತ್ರೋತ್ಸವ ಅತ್ಯಂತ ಭಕ್ತಿಭಾವದಿಂದ ನೆರವೇರಿತು.
ಬೆಳಗಾವಿಯ ಶಹಾಪೂರದ ಗಾಡೆ ಮಾರ್ಗ, ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾತಂಗಿ ದೇವಿಯ ಯಾತ್ರೋತ್ಸವ ನಡೆಸಲಾಗುತ್ತಿದೆ. ಮಂಗಳವಾರದಂದು ಶ್ರೀದೇವಿಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನೂರಾರು ಮಹಿಳೆಯರು ಶ್ರೀ ದೇವಿಯರಿಗೆ ಉಡಿ ತುಂಬಿ, ದೇವಿಯ ದರ್ಶನ ಪಡೆದುಕೊಂಡರು.
ಈ ನಿಮಿತ್ಯ ನಡೆದ ಮಹಾಆರತಿಯಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ದೇವಿಯರ ಯಾತ್ರೋತ್ಸವದ ಅಂಗವಾಗಿ ಭಜನೆ ಕೀರ್ತನೆ ಮುಂತಾದ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀರಾಮಸೇನಾ ಹಿಂದೂಸ್ಥಾನನ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ಅವರು ದೇವಿಯ ದರ್ಶನ ಪಡೆದು, ಎಲ್ಲ ಭಕ್ತರಿಗೂ ಶುಭ ಹಾರೈಸಿದರು. ದೇವಿಯೂ ಸಮಸ್ತ ಬೆಳಗಾವಿಯ ಜನತೆಗೆ ಆರ್ಯುರಾರೋಗ್ಯ ನೀಡಿ ಕರುಣಿಸಲಿ ಎಂದು ಪ್ರಾರ್ಥಿಸಿದರು.