Uncategorized
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ “ಪ್ರಮೋದ್ ಮುತಾಲಿಕ್” ವಿರುದ್ಧ ಎಫ್‌ಐಆರ್

ಜ.9 ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಭಾಷಣ ಮಾಡಿದ್ದರು. ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಇತರರ ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಗುಪ್ತ ಮಾಹಿತಿ ಸಿಬ್ಬಂದಿ ಶ್ರೀಧರ್ ಎಂ.ಕೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಿಎನ್‌ಎಸ್ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲಾಗಿದೆ. ಹಿಂದೂಗಳು ಮುಸ್ಲಿಂರಿಗೆ ಕುರಿಮಾಂಸ ಎಂದು ಹೇಳಿ ಕೊಡಿ ಅವರು ಹಲಾಲ್ ಆಗಿಲ್ಲ ಎಂದು ತಿನ್ನುವುದಿಲ್ಲ, ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ.
ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶ ಹಾಗು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಎಫ್‌ಐಆರ್ ದಾಖಲಿಸಲಾಗಿದೆ.