Uncategorized

ಬಾಗಲಕೋಟೆಯ ಕಲಾದಗಿ ಗ್ರಾಮಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ: ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್!

ಬಾಗಲಕೋಟೆಯ ಕಲಾದಗಿ ಗ್ರಾಮಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ: ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಬೆಳಗಾವಿಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತಿರುವ ಅವರು, ಮಾರ್ಗಮಧ್ಯೆ ಸಂಘದ ಪ್ರಮುಖ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ.
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಬೆಳಗಾವಿಯಿಂದ ವಿಜಯಪುರಕ್ಕೆ ಪ್ರಯಾಣಿಸುವ ಮಾರ್ಗಮಧ್ಯೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಂಘದ ಕಾರ್ಯಕರ್ತರಾದ ಡಾ. ಪ್ರವೀಣ ಭಜಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅತ್ಯಂತ ಪ್ರಭಾವಿ ಝಡ್-ಪ್ಲಸ್ (Z+) ಹಾಗೂ ಅಡ್ವಾನ್ಸ್ ಸೆಕ್ಯುರಿಟಿ ಲೈನ್ (ASL) ಭದ್ರತೆ ಹೊಂದಿರುವ ಭಾಗವತ್ ಅವರ ಭೇಟಿಯ ಹಿನ್ನೆಲೆಯಲ್ಲಿ ಇಡೀ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಕಲಾದಗಿ ಗ್ರಾಮದಾದ್ಯಂತ ತೀವ್ರ ತಪಾಸಣೆ ಹಾಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೊಯಲ್ ಅವರ ನೇರ ನೇತೃತ್ವದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಕಾರ್ಯಕರ್ತರ ಮನೆ ಭೇಟಿಯ ಬಳಿಕ ಮೋಹನ್ ಭಾಗವತ್ ಅವರು ಗದ್ದಕೇರಿ ಕ್ರಾಸ್ ಮಾರ್ಗವಾಗಿ ವಿಜಯಪುರಕ್ಕೆ ತಮ್ಮ ಪ್ರಯಾಣವನ್ನು ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button