Uncategorized
ಗಾಂಧಿ ಭಾರತ ಕಾರ್ಯಕ್ರಮ ,ಕಾಂಗ್ರೆಸ್ ಶತಮಾನೋತ್ಸವದ ಅಧಿವೇಶನ ಅದ್ದೂರಿಯಾಗಿ ಮಾಡುತ್ತಿದ್ದೇವೆ; ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ:ಅತಿ ವಿಜೃಂಭಣೆಯಿಂದ, ಮೈಸೂರು ದಸರಾ ಮಹೋತ್ಸವ ಹೇಗಿತ್ತೋ ಅದೆ ರೀತಿ ಅದ್ದೂರಿಯಾಗಿ ನಾಳೆ ಹಾಗೂ ನಾಡಿದ್ದು
ಗಾಂಧಿ ಭಾರತ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಶತಮಾನೋತ್ಸವದ ಅಧಿವೇಶನವನ್ನು ಸಡಗರ ಸಂಭ್ರಮದಿಂದ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ
ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಅಧಿವೇಶವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಸರಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡಿದರು.