Uncategorized

ಎಲ್ಲ ಕ್ರಿಮಿನಲ್ಸಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಗರದಲ್ಲಿಂದು ಹಸುಗಳ ಕೆಚ್ಚಲು ಕತ್ತರಿಸಿದ ವಿಚಾರವಾಗಿ ಮಾತನಾಡಿದ ಅವರು
ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಪಿಎಫ್ ಐ, ಎಸ್ ಡಿಪಿಐ ಮೇಲಿನ ಕೇಸ್ ಗಳನ್ನ ಹಿಂಪಡೆದ ಹಿನ್ನೆಲೆ ಸಮಾಜ ದ್ರೋಹಿ ಶಕ್ತಿಗಳಿಗೆ ಬಲ ಬಂದಿದೆ. ಸರ್ಕಾರ ಕ್ರಿಮಿನಲ್ ಗಳನ್ನು ಎನಾದ್ರು ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಬಂದಿದೆ ಆರೋಪಿಸಿದರು.

ಪರಿಣಾಮ ಈ ರೀತಿಯ ಪ್ರಕರಣಗಳು ನಡೀತಿವೆ. ಸರ್ಕಾರ ಗಟ್ಟಿಯಾಗಿದ್ರೆ, ಈ ರೀತಿ ನಡೆಯೋದಿಲ್ಲ
ಸರ್ಕಾರದ ಸಂಪೂರ್ಣ ವೈಫಲ್ಯ ಆಗಿದ್ದು.ಅಮಾಯಕ ಹಸುಗಳ ಮೇಲೆ ಈ ರೀತಿ ಮಾಡ್ತಾರೆ.
ಇದರ ಬಗ್ಗೆ ಹೋರಾಟ ಮಾಡಿದ್ರೆ ಇದು ರಾಜಕೀಯ ಪ್ರೇರಿತ ಅಂತ ಸಿಎಂ ಅಸಡ್ಡೆಯಿಂದ ಮಾತನಾಡ್ತಾರೆ
ಹೀಗಾದ್ರೆ ಜನರ ಬದುಕು ಹೇಗೆ ಅನ್ನೋದನ್ನ ವಿಚಾರ ಮಾಡಬೇಕು ಎಂದರು.

ಎಲ್ಲಾ ಕ್ರಿಮಿನಲ್ಸ್ ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ ಆಗಿದೆ. ಕುಡಿದ ಮತ್ತಿನಲ್ಲಿ ಅವರ ಮನೆಯವರನ್ನಾ ಕೊಲೆ ಮಾಡತ್ತಾರಾ?. ಯಾರು ಆ ರೀತಿ ಹೇಳಿದ್ದಾರಲ್ಲಾ ಅವರ ಮನೆಯಲ್ಲೇ ಯಾರನ್ನದ್ರೂ ಕೊಲೆ ಮಾಡಿದ್ರೆ ಬಿಡ್ತಾರಾ? ಕುಡಿದಾಗ ಏನು ಬೇಕಾದ್ರೂ ಮಾತನಾಡಬಹುದಾ? ಇದ್ದ ಹಸುಗಳನ್ನು ನರಳುವಂತೆ ಮಾಡಿ, ಹೊಸದನ್ನ ಕೊಡಸ್ತೀನಿ ಅಂದ್ರೆ?
ಜಮೀರ್ ಗೆ ಏನಾದ್ರೂ ಬುದ್ದಿ ಇದೆಯಾ? ಏನು ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂಡಿಯಿಂದ ಕಾಂಗ್ರೆಸ್ ಹೊರ ಬಂದಿಲ್ಲ ಇಂಡಿನೇ ಕಾಂಗ್ರೆಸ್ ನ್ನ ಹೊರ ಹಾಕಿದೆ

ಉಳಿದ ಇಂಡಿಗಳು ಕೂಡಿ ಇವರ ಕೈಯಲ್ಲಿ ಗಿಂಡಿ ಕೊಟ್ಟು ಕಳ್ಸಿವೆ ಎಂದು ವ್ಯಂಗ್ಯವಾಡಿದ ಅವರು
ಕಾಂಗ್ರೆಸ್ ಪಕ್ಷ ಎಲ್ಲರಿಗೂ ಭಾರ ಆಗಿದೆ ಎಂದರು.

ರಾಜ್ಯಕ್ಕೆ ಸುರ್ಜೆವಾಲ ಆಗಮನ ವಿಚಾರ

ಅವರು ಬಂದ್ರೆ ಏನು ಆಗಲ್ಲ. ಅವರು ಆರು ತಿಂಗಳಿಗೊಮ್ಮೆ ಬಂದು ಏನು ಮಾಡ್ತಾರೆ ನನಗೆ ಗೊತ್ತಿಲ್ಲ. ಅವರದ್ದು ರೋಜಿ ರೊಟ್ಟಿ ನಡೆಯುತ್ತೆ ಎಂದು ಆರೋಪಿಸಿದರು.

ಡಿಕೆ ಶಿವಕುಮಾರ್ ಸಿಎಂ ಆಗೋ ವಿಚಾರ

ರಾಜ್ಯದಲ್ಲಿ ಕಾಂಗ್ರೆಸ್ ಬಂದಾಗಿನಿಂದ ಒಳಗೊಳಗೇ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಈಗ ದೊಡ್ಡ ಪ್ರಮಾನದಲ್ಲಿ ಏಳುತ್ತಿದೆ. ಲಾ & ಆರ್ಡರ್ ಸಮಸ್ಯೆ ಆಗೋಕೆ ಭ್ರಷ್ಟಾಚಾರ, ಒಳಬೇಗುದಿ ಕಾರಣ.
ಈಗ ನಡೆಯೋ ಘಟನೆಗಳಿಗೆ ಯಾವುದೇ ರೀತಿಯ ನಿಯಂತ್ರಣ ಇಲ್ಲಾ ಎಂದು ಆರೋಪ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button