ಹಂತ-ಹಂತವಾಗಿ ಗುತ್ತಿಗೆದಾರರ ಬಾಕಿ ಬಿಲ್ ವಿತರಣೆ; ಸಚಿವ ಸತೀಶ ಜಾರಕಿಹೊಳಿ

ಹಿಂದಿನ ಬಿಜೆಪಿ ಸರ್ಕಾರ ಗ್ರ್ಯಾಂಟ್ ಇಲ್ಲದೇ ಕಾಮಗಾರಿಯನ್ನು ನಡೆಸಿರುವು ಮಹಾತಪ್ಪು. ಗುತ್ತಿಗೆದಾರರ ಬಾಕಿ ಬಿಲ್ಲನ್ನು ಹಂತ ಹಂತವಾಗಿ ನೀಡಲಾಗುವುದು. ಇದಕ್ಕೆ ಸಮಯಾವಕಾಶ ಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಮೊನ್ನೆಯ ದಿನವಷ್ಟೆ ಲೋಕೋಪಯೋಗಿ ಇಲಾಖೆಯ ಸಭೆ ನಡೆಸಿ, ಗುತ್ತಿಗೆದಾರರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಹೊಂದಾಣಿಕೆಯ ಮೇಲೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸರ್ಕಾರ ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸಲು ಕೆಲಸ ಮಾಡಲಿದೆ ಎಂದರು.
ಇನ್ನು ಗುತ್ತಿಗೆದಾರರ ಬಾಕಿ ಬಿಲಗಳನ್ನು ಮಂಜೂರುಗೊಳಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಗ್ರ್ಯಾಂಟ ಇಲ್ಲದೇ ಗುತ್ತಿಗೆ ನೀಡಿ ಕಾಮಗಾರಿಗಳನ್ನು ಮಾಡಿಸಿಕೊಂಡಿದ್ದು, ಮಹಾತಪ್ಪು. ಬಾಕಿ ಬಿಲ್ ನೀಡಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಹಂತ-ಹಂತವಾಗಿ ಬಾಕಿ ಬಿಲ್ ನೀಡಲಾಗುವುದೆಂದು ತಿಳಿಸಿದರು.