
ಕಾಗವಾಡದಲ್ಲಿ ವಕೀಲರ ಮುಷ್ಕರ; ಎಸಿ-ತಹಶೀಲ್ದಾರ ಭೇಟಿ…ಮನವೊಲಿಸಲು ಪ್ರಯತ್ನ
ಪಟ್ಟು ಬಿಡದ ಪ್ರತಿಭಟನಾಕಾರರು…ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದ ಅಧಿಕಾರಿಗಳು
ಕಾಗವಾಡದಲ್ಲಿ ವಕೀಲರ ಮುಷ್ಕರ…
ಎಸಿ-ತಹಶೀಲ್ದಾರ ಭೇಟಿ
ಮುಷ್ಕರ ಹಿಂಪಡೆಯಲು ಮನವೊಲಿಸಲು ಪ್ರಯತ್ನ
ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದ ಅಧಿಕಾರಿಗಳು
ಕಾಗವಾಡದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ವಕೀಲರ ಮುಷ್ಕರ ಸ್ಥಳಕ್ಕೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾಂವಿ ಮತ್ತು ಕಾಗವಾಡ ತಹಶಿಲ್ದಾರ ರಾಜೇಶ ಬುರ್ಲಿ ಅವರು ಭೇಟಿ ನೀಡಿ ವಕೀಲ ಸಂಘದವರು ಬೇಡಿಕೆ ಇಟ್ಟ ೦೨ ಎಕರೆ ೨೦ ಗುಂಟೆ ಸ್ಥಳ ನೀಡಲು ಸರ್ಕಾರದಿಂದ ನ್ಯಾಯಾಲಯ ನಿರ್ಮಿಸಲು ಸ್ಥಳ ನೀಡಲು ಎಲ್ಲ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಆದರೇ ಸೂಕ್ತ ನಿರ್ಣಯ ಸಿಗುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಗುರುವಾರ ಸಂಜೆ ನ್ಯಾಯವಾದಿಗಳು ಕೈಗೊಂಡ ಮುಷ್ಕರ ಸ್ಥಳಕ್ಕೆ ಇಬ್ಬರು ಅಧಿಕಾರಿಗಳು ಭೇಟಿ ನೀಡಿ ನಿಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಕಾಗೆ ಅವರ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಆದೇಶ ನೀಡಿದ್ದರಿಂದ ರಾಜ್ಯದ ಹಿರಿಯ ಅಧಿಕಾರಿಗಳು ಎ.ಪಿ.ಎಮ್.ಸಿ ಇಲಾಖೆಗೆ ಪತ್ರ ಬರೆದು ನ್ಯಾಯಾಲಯ ನಿರ್ಮಿಸಲು ಸ್ಥಳ ಮರಳಿ ವರ್ಗಾಯಿಸಬೇಕೆಂದು ನೀಡಿದ ಆದೇಶ ಪತ್ರವನ್ನು ನ್ಯಾಯವಾದಿಗಳಿಗೆ ನೀಡಿ ಮುಷ್ಕರ ಹಿಂಪಡೆಯಲು ಹೇಳಿದರು.