ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಸ್ಥಳದಲ್ಲಿ “ವಾಮಾಚಾರ”

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ವಾಮಾಚಾರ ನಡೆದಿತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಕಾರು ಅಪಘಾತ ನಡೆದ ಕೆಲವೇ ಹೆಜ್ಜೆಗಳ ದೂರದಲ್ಲಿ ಮಡಿಕೆ, ನಿಂಬೆ ಹಣ್ಣು , ದಾರದ ಉಂಡಿ,ಕುಂಬಳಕಾಯಿ ಇಟ್ಟು ವಾಮಾಚಾರ ನಡೆಸಲಾಗಿದೆ. ಇದರ ನಡುವೆ ಅಪಘಾತಕ್ಕೂ ವಾಮಾಚಾರಕ್ಕೂ ಲಿಂಕ್ ಇದ್ಯಾ ಎನ್ನುವ ಅನುಮಾನ ಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಅಪಘಾತ ನಡೆದ 50 ಅಡಿಯಲ್ಲಿ ಈ ವಾಮಾಚಾರ ನಡೆದಿದೆ.
ಲಕ್ಕಿ ನಂಬರ್ ಕಾರು ಪಡೆದಿದ್ದ ಲಕ್ಷ್ಮೀ: ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ವವರಿಗೆ ಹೊಸ ಸರ್ಕಾರಿ ಕಾರು ಹಂಚಿಕೆಯಾಗಿತ್ತು. ತಮ್ಮ ಲಕ್ಕಿ ಕಲರ್ ಹಾಗೂ ಲಕ್ಕಿ ನಂಬರ್ ಕಾರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅಲಾಟ್ ಮಾಡಿಸಿಕೊಂಡಿದ್ದರು. ಕಪ್ಪು ಬಣ್ಣದ ಟೊಯೋಟಾ ಇನೋವಾ ಹೈಕ್ರಾಸ್ ಕಾರು ತಮಗೆ ಬೇಕು ಎಂದು ಅವರು ಅಲಾಟ್ ಮಾಡಿಸಿಕೊಂಡಿದ್ದರು. ಅದರೊಂದಿಗೆ ಕೆಎ 01 ಜಿಎ 9777 ಸಂಖ್ಯೆಯ ನಂಬರ್ ಪ್ಲೇಟ್ ಕೂಡ ಪಡೆದಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸೇರಿದ ಎಲ್ಲಾ ಕಾರುಗಳು ಕಪ್ಪು ಬಣ್ಣದ್ದು ಹಾಗೂ 9777 ಸಂಖ್ಯೆಯ ಕಾರುಗಳಾಗಿವೆ. ವಿಜಯದಶಮಿಯಂದು ಬೆಂಗಳೂರಲ್ಲಿ ಕಾರಿಗೆ ಪೂಜೆ ಮಾಡಿಸಿದ್ದರು. ಸರ್ಕಾರಿ ಕಾರು ಚಾಲಕ ಶಿವು ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಪೂಜೆ ಮಾಡಿಸಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತ ಪ್ರಕರಣದಲ್ಲಿ ಕಿತ್ತೂರು ಪೊಲೀಸರ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಕಿತ್ತೂರು ಸಿಪಿಐ ಶಿವಾನಂದ, ಪಿಎಸ್‌ಐ ಪ್ರವೀಣ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ಸ್ಥಳದ ಪರಿಶೀಲನೆ ಮಾಡಿದ್ದಾರೆ.