Uncategorized

ಲೋಕಾಪುರ – ರಾಮದುರ್ಗ – ಸವದತ್ತಿ – ಧಾರವಾಡ ಸೇರಿದಂತೆ ನೂತನ ರೈಲು ಮಾರ್ಗ ನಿರ್ಮಾಣ .

ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ನೈರುತ್ಯ ವಲಯದ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ( ಜಿ.ಎಮ್ ) ಶ್ರೀ ಅರವಿಂದ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ, ಬೆಳಗಾವಿಗೆ ಸಂಬಂಧಿಸಿದಂತೆ ರೈಲು ಸೇವೆ ಒದಗಿಸುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದರು.

 ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್: ಪ್ರಸ್ತಾಪಿತ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸುವುದು ಬಹಳ ಅವಶ್ಯವಿದ್ದು ಮತ್ತು ಬೆಳಗಾವಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯೂ ಸಹ ಆಗಿದೆ. ಆದಕಾರಣ ಈ ರೈಲಿನ ಪ್ರವಾಸದ ಅಲ್ಪ ಸಮಯ ಬದಲಾವಣೆಯೊಂದಿಗೆ ಇದು ಸಾಧ್ಯವಿದ್ದು ಪ್ರಯುಕ್ತ ಈ ವಿಷಯವನ್ನು ಗಂಭೀರವಾಗಿ ಅವಲೋಕಿಸಿ ಕ್ರಮವನ್ನು ಜರುಗಿಸಲು ರೈಲ್ವೆ ಮಹಾಪ್ರಬಂಧಕರಿಗೆ ತಿಳಿಸಲಾಯಿತು.

 ಬೆಳಗಾವಿ ಮಿರಜ್ ನಡುವೆ ದಿನನಿತ್ಯ ಸಂಚರಿಸುವ ರೈಲು: ಈ ರೈಲು ಸೇವೆಯನ್ನು ಪ್ರತಿ ಮಾಹೆ ಮುಂದುವರಿಸುತ್ತಾ ಬಂದಿದ್ದು, ಇದರ ಸೇವೆಯನ್ನು ಖಾಯಂ ಮಾಡುವಂತೆಯೂ ಮತ್ತು ಇದನ್ನು “ಮೆಮು”ರೈಲನ್ನಾಗಿ ಪರಿವರ್ತಿಸುವ ಬಗ್ಗೆ ಕ್ರಮವನ್ನು ಜರುಗಿಸಲು ಸೂಚಿಸಲಾಯಿತು.

ಲೋಕಾಪುರ – ರಾಮದುರ್ಗ – ಸವದತ್ತಿ – ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ : ಪ್ರಸ್ತಾಪಿತ ರೈಲು ಮಾರ್ಗ ನಿರ್ಮಾಣ ಅವಶ್ಯಕತೆ ಇದ್ದು, ಈ ಕುರಿತು ಮುಂಚಿತ ಸಮೀಕ್ಷೆ ನಡೆಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಕೂಡಲೇ ಮುಂದಿನ ಅಗತ್ಯ ಕ್ರಮವನ್ನು ಜರುಗಿಸಲು ಸೂಚಿಸಿ, ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ  ಅವರಿಗೆ ಮನವಿ ಸಲ್ಲಿಸಿದರು.

ಎಲ್ಲ ಬೇಡಿಕೆಗಳನ್ನು ಅವಲೋಕಿಸಿದ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಈ ಕುರಿತು ಶೀಘ್ರ ಅನುಕೂಲಕರವಾದ ಕ್ರಮವನ್ನು ಕೈಗೊಳ್ಳುವುದಾಗಿ ಪ್ರಸ್ತಾಪಿಸಿದರೆಂದು ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಇವರು ತಿಳಿಸಿದರು.

 

Related Articles

Leave a Reply

Your email address will not be published. Required fields are marked *

Back to top button