ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ವಿದ್ಯುತ್ ಸಹಕಾರಿ ಸಂಘ ಸ್ಪಂದಿಸಲಿ – ಅದ್ಯಕ್ಷ ಶಾನೂಲ ತಹಸಿಲ್ದಾರ.

ಹುಕ್ಕೇರಿ -ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹ ಜ್ಯೋತಿ ಯೋಜನೆಗೆ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಸ್ಫಂದಿಸಲಿ ಎಂದು ಗ್ಯಾರಂಟಿ ಯೋಜನೆಯ ತಾಲೂಕಾ ಅದ್ಯಕ್ಷ ಶಾನೂಲ ತಹಸಿಲ್ದಾರ ಹೇಳಿದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನೂತನ ಅದ್ಯಕ್ಷ ಜಯಗೌಡಾ ಪಾಟೀಲ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹುಕ್ಕೇರಿ ತಾಲೂಕಾ ಕಛೇರಿಗೆ ಭೇಟಿ ನೀಡಿ ಅದ್ಯಕ್ಷರ ಜೋತೆ ಸಮಾಲೋಚನೆ ನಡೆಸಿದರು.
ಹುಕ್ಕೇರಿ ತಾಲೂಕಾ ವಿವಿಧ ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ ಜಯಗೌಡಾ ಪಾಟೀಲ ಮತ್ತು ಕಾಂಗ್ರೆಸ್ ಮುಖಂಡ ಜಾರಕಿಹೋಳಿ ಆಪ್ತ ಈರಪ್ಪಾ ಬಂಜೆರಾಮ ಇವರನ್ನು ಸತ್ಕರಿಸಿ ಅಭಿನಂದಿಸಿದರು ಸತ್ಕಾರ ಸ್ವೀಕರಿಸಿ ಮಾತನಾಡಿದ ಜಯಗೌಡಾ ಪಾಟೀಲ ಜೋಲ್ಲೆ ಮತ್ತು ಜಾರಕಿಹೋಳಿಯವರ ಆಶಿರ್ವಾದದಿಂದ ನನಗೆ ಅವಕಾಶ ದೊರೆತಿದ್ದು ವಿಷೇಶವಾಗಿ ಹುಕ್ಕೇರಿ ತಾಲೂಕಿನ ರೈತರಿಗೆ ವಿದ್ಯುತ್ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುವದು ಎಂದರು
ನಂತರ ಕಾಂಗ್ರೆಸ್ ಮುಖಂಡರಾದ ಡಾ, ಸಾಧೀಕ ಮಕಾನದಾರ ಮತ್ತು ಕಬೀರ ಮಲ್ಲಿಕ ಹುಕ್ಕೇರಿ ನಗರದ ಹೋರವಲಯ ದಲ್ಲಿ ವಾಸಿಸುವ ನಿವಾಸಿಗಳಿಗೆ 24 ಗಂಟೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಸಲ್ಲಿಸಿದರು.
ಶಾನೂಲ ತಹಸಿಲ್ದಾರ ಮಾತನಾಡಿ ರಾಜ್ಯದ ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರ್ಕಾರ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಒಂದು ಲಕ್ಷ ಒಂದ ನೂರು ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ,ಮುಂಬರುವ ದಿನಗಳಲ್ಲಿ ನೂತನ ಅದ್ಯಕ್ಷರು ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಾಮಾಣಿಕ ಸೇವೆ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಇಮ್ರಾನ್ ಮೊಮಿನ, ಸದಸ್ಯರಾದ ಸಂಜಿವ ಮುತ್ನಾಳ ಗಜಬರ ಮುಲ್ಲಾ, ಸಂಜಿವಗೌಡಾ ಪಾಟೀಲ, ಕಾಂಗ್ರೆಸ್ ಯುವ ಮುಖಂಡ ಮೌನೇಶ ಪೊತದಾರ, ನಿಶಾ ಕಿಲ್ಲೆದಾರ, ಅಕ್ಷಯ ವೀರಮುಖ, ಶ್ರೀನಿವಾಸ ವ್ಯಾಪಾರಿ, ಭೀಮಗೌಡ ಅಮ್ಮಣಗಿ, ರಾಜು ಗೋಸರವಾಡಕರ, ಚಂದು ಮುತ್ನಾಳೆ, ಶಿವಾನಂದ ಪಾಟೀಲ, ಜಯಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.