Uncategorized

ವಿನೂತನ ಸಂಚಾರಿ ಆರೋಗ್ಯ ವಾಹನಗಳಿಗೆ ಸಚಿವ ಎಂ.ಬಿ.ಪಾಟೀಲ ಚಾಲನೆ: ಶೀಘ್ರದಲ್ಲೇ ಇನ್ನೊಂದು ವಾಹನ ಲೋಕಾರ್ಪಣೆ

ಕಾರ್ಮಿಕರ ಆರೋಗ್ಯ ಸೇವೆಗಾಗಿ, ಅವರಿರುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರವು ವಿನೂತನ ಸಂಚಾರಿ ಆರೋಗ್ಯ ಘಟಕವು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಎರಡು ವಾಹನಗಳಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ವಿಜಯಪುರ ಜಿಲ್ಲೆಗೆ ಮೂರು ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳುಳ್ಳ ವಾಹನಗಳನ್ನು ಒದಗಿಸಲಾಗಿದ್ದು, ಶೀಘ್ರದಲ್ಲೇ ಮೂರನೇ ವಾಹನವನ್ನು ಸಹ ಸಾರ್ಜನಿಕರ ಸೇವೆಗೆ ಅರ್ಪಿಸಲಾಗುವುದು.
ಈ ಸಂಚಾರಿ ಘಟಕದ ಮೂಲಕ ತಪಾಸಣೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು, ವಿಶೇಷವಾಗಿ ಬಡವರು, ಕೂಲಿಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಇದರ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು..

Related Articles

Leave a Reply

Your email address will not be published. Required fields are marked *

Back to top button