Uncategorizedಧಾರವಾಡ
ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ; ಸಿಸಿಟಿವಿಯಲ್ಲಿ ಸೆರೆ

ಧಾರವಾಡ : ಧಾರವಾಡ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಗುರುತು ಪತ್ತೆಯಾಗಿಲ್ಲ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊದಲು ಪೊಲೀಸರು ಪಾದಚಾರಿ ಮೇಲೆ ಬಸ್ ಹರಿದಿದೆ ಎಂದು ತಿಳಿದಿದ್ದರು. ಆದರೆ, ಸಿಸಿಟಿವಿ ಪರಿಶೀಲನೆ ಬಳಿಕ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. ಧಾರವಾಡ ಉಪನಗರ ಠಾಣೆಗೆ ಕೇಸ್ ವರ್ಗಾವಣೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.