Uncategorized
ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಇಂದು ಪ್ರಯಾಗ್‌ರಾಜ್‌ನಲ್ಲಿ ತಮ್ಮ ಪತ್ನಿ ಪ್ರೀತಿ ಅದಾನಿ ಮತ್ತು ಹಿರಿಯ ಪುತ್ರ ಕರಣ್ ಅದಾನಿ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೌತಮ್ ಅದಾನಿ ಅವರು ತಮ್ಮ ಕಿರಿಯ ಪುತ್ರ ಜೀತ್ ಅದಾನಿ ಫೆಬ್ರವರಿ 7ರಂದು ವಿವಾಹವಾಗಲಿದ್ದಾರೆ ಎಂದು ಘೋಷಿಸಿದ್ದಾರೆ
.ನನ್ನ ಮಗ ಜೀತ್ ಮದುವೆ ಫೆಬ್ರವರಿ 7ರಂದು ನಡೆಯಲಿದೆ. ನಮ್ಮ ಆಚರಣೆಗಳು ಸಾಮಾನ್ಯ ಜನರಂತೆಯೇ ಇರುತ್ತವೆ. ಆತನ ವಿವಾಹವು ತುಂಬಾ ಸರಳ ಮತ್ತು ಸಂಪೂರ್ಣವಾಗಿ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ” ಎಂದು ಗೌತಮ್ ಅದಾನಿ ತಮ್ಮ ಮಗನ ವಿವಾಹದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.