ಬೆಳಗಾವಿ

12 ವರ್ಷದಿಂದ ಪಿಎಂ ಆವಾಸ್ ಯೋಜನೆಗಾಗಿ ಕಾಯುತ್ತಿರುವ ಜನ,ಮಹಾನಗರ ಪಾಲಿಕೆಯ ವಿರುದ್ಧ ಅಸಮಾಧಾನ.

ಬೆಳಗಾವಿ: ಪ್ರಧಾನಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮನೆ ಕಟ್ಟಿ ಕೊಡುತ್ತಾರೆಂದು 1 ಲಕ್ಷ 12 ಸಾವಿರ ರೂಪಾಯಿ ಹಣ ಕಟ್ಟಿ 12 ವರ್ಷ ಕಳೆದೂ ಮಹಾನಗರ ಪಾಲಿಕೆಯಿಂದ ಮನೆ ನಿರ್ಮಿಸಿ ಕೊಡದ ಹಿನ್ನೆಲೆ ಇಂದು ಬಡ ಕುಟುಂಬದವರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಅನಗೋಳ, ವಡಗಾಂವ, ಶಹಾಪೂರ ಭಾಗದ ಸುಮಾರು 500 ಜನರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿಯಲ್ಲಿ 1 ಲಕ್ಷ 12 ಸಾವಿರ ರೂಪಾಯಿ ಹಣವನ್ನು ಕಟ್ಟಿಸಿಕೊಳ್ಳಲಾಗಿದೆ. 12 ವರ್ಷ ಕಳೆದರೂ ಈ ಬಡ ಕುಟುಂಬಗಳಿಗೆ ಮಹಾನಗರ ಪಾಲಿಕೆಯಿಂದ ಮನೆ ನಿರ್ಮಿಸಿ ಕೊಡಲಾಗಿಲ್ಲ. ಆದ್ದರಿಂದ ಇಂದು ಮಹಾನಗರ ಪಾಲಿಕೆ ಮೆಟ್ಟಿಲೇರಿ ಇಂದು ಮತ್ತೊಮ್ಮೆ ಪ್ರತಿಭಟನೆ ನಡೆಸಿ, ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಮಹಿಳೆಯೋರ್ವರು 12 ವರ್ಷದ ಹಿಂದೆ 1 ಲಕ್ಷ 12 ಸಾವಿರ ರೂಪಾಯಿ ಹಣವನ್ನು ಮಹಾಪಾಲಿಕೆಗೆ ಕಟ್ಟಿದ್ದು, ಪ್ರಧಾನಿ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸುವುದಾಗಿ ಕೇವಲ ಭರವಸೆಯನ್ನು ಮಾತ್ರ ನೀಡಲಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ಯಾವುದೇ ಸರಿಯಾದ ರೀತಿಯ ಸ್ಪಂದನೆ ದೊರೆಯುವುದಿಲ್ಲ. ನಗರ ಪ್ರದೇಶದಲ್ಲಿ ಎಲ್ಲಿಯಾದರೂ ಮನೆ ನಿರ್ಮಿಸಿದರೂ ಸರಿ ಎನ್ನುತ್ತಿದ್ದಾರೆ. ಬೈಟ್

ಇನ್ನು ಮನೆಗೆಲಸ ಮಾಡಿ, ಚಿನ್ನ ಅಡವಿಟ್ಟು, ಹೀಗೆ ಬಡವರು ಕಷ್ಟಪಟ್ಟು 1 ಲಕ್ಷ 12 ಸಾವಿರದಂತೆ ಸುಮಾರು 500 ಜನರು ಬೆಳಗಾವಿ ಮಹಾನಗರ ಪಾಲಿಕೆಗೆ ಹಣವನ್ನು ಕಟ್ಟಿದ್ದಾರೆ. ಆದರೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಯಾವುದೇ ರೀತಿಯ ಮನೆಯನ್ನು ನಿರ್ಮಿಸಿ ಕೊಟ್ಟಿಲ್ಲ. ಕೆಲ ಜನರು ಈ 12 ವರ್ಷದಲ್ಲಿ ಸಾವನ್ನಪ್ಪಿದ್ದಾರೆ. ನಾವು ಸಾವನ್ನಪ್ಪುವ ಮೊದಲೂ ಮನೆಯಿಲ್ಲದಿದ್ದರೂ ಸರಿ ಜೋಪಡಿಯನ್ನಾದರೂ ಮಹಾನಗರ ಪಾಲಿಕೆ ನಿರ್ಮಿಸಿ ಕೊಡಲಿ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಬೈಟ್

ಈ ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಣವನ್ನು ಕಟ್ಟಿದ ಜನರು ಭಾಗಿಯಾಗಿದ್ಧರು. ಆಯುಕ್ತರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಮನೆ ನಿರ್ಮಿಸಿ ಕೊಡುವ ಭರವಸೆಯನ್ನ ನೀಡಿರುವುದಾಗಿ ತಿಳಿಸಿದರು.

 

Related Articles

Leave a Reply

Your email address will not be published. Required fields are marked *

Back to top button