ರೋಟರಿಯಿಂದ ಅಥಣಿಯಲ್ಲಿ ಜಿ ಎಮ್ ಗಾಳಿಪಟ ಉತ್ಸವ.

ಅಥಣಿ : ರೋಟರಿ ಸಂಸ್ಥೆಯಿಂದ ಅಥಣಿ ನಗರದಲ್ಲಿ ಪ್ರಥಮ ಬಾರಿಗೆ ಭೋಜರಾಜ ಕ್ರೀಡಾಂಗಣದಲ್ಲಿ ದಿನಾಂಕ 26 ರಂದು ಮದ್ಯಾಹ್ನ 02 ಗಂಟೆಗೆ ಜಿ ಎಮ್ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ನಗರದಿಂದ ಬಹು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಮೊದಲ ವಿನೂತನ ಪ್ರಯತ್ನವನ್ನು ಯಶಸ್ವಿಗೊಳಿಸಬೇಕು ಎಂದು ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಅವರು ಹೇಳಿದರು.
ಅವರು ಸ್ಥಳೀಯ ಖಾಸಗಿ ಹೋಟೇಲ್‌ನಲ್ಲಿ ಜರುಗಿದ ಸುದ್ದಿಘೋಷ್ಠಿಯಲ್ಲಿ ಮಾತನಾಡಿ ಅಥಣಿ ಜನರಿಗೆ ಹಾಗೂ ಅಥಣಿ ಭಾಗದ ಮಕ್ಕಳಿಗೆ ಗಾಳಿಪಟ ಉತ್ಸವವನ್ನು ತೋರಿಸುವ ಉದ್ದೇಶ ಹೊಂದಿ ರೋಟರಿ ವತಿಯಿಂದ ಹೊಸ ಪ್ರಯೋಗ ಮಾಡಿದ್ದು ಸಮಸ್ತ ಅಥಣಿ ಜನತೆಯು ಕೈ ಜೋಡಿಸಿ ಯಶಸ್ವಿಗೊಳಿಸಿ ಎಂದರು.
ಮೊಬೈಲ್ ಹಾವಳಿಯಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ರೋಟರಿ ಸಂಸ್ಥೆಯು ಹೊಸ ಪ್ರಯೋಗಕ್ಕೆ ಮುಂದಾಗಿರುವುದಕ್ಕೆ ಅನೇಕ ಹಳ್ಳಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ, ಈಗಾಗಲೇ ಸುಮಾರು 1000 ಕ್ಕೂ ಅಧಿಕ ಜನ ಹೆಸರು ನೊಂದಾಯಿಸಿಕೊಂಡಿರುವುದು ವಿಶೇಷವಾಗಿದೆ.
ಮುಂದುವರೆದು ಮಾತನಾಡಿ ಮರೆಯಾಗುತ್ತಿರುವ ಗಾಳಿಪಟ ಹವ್ಯಾಸವನ್ನು ಮತ್ತೆ ಮಕ್ಕಳಲ್ಲಿ ಚಿಗುರಿಸುತ್ತಿರುವ ಉದ್ದೇಶ ನಮ್ಮದು, ಇಲ್ಲಿ ಯಾವುದೇ ವಯಸ್ಸಿನ ಎಲ್ಲರಿಗೂ ಉಚಿತವಾಗಿ ಪ್ರವೇಶ ಕಲ್ಪಿಸಿದ್ದೆವೆ, ವಿಶೇಷವಾಗಿ ಮಾಂಜಾ ದಾರದ ಬಳಕ್ಕೆ ನಿರ್ಬಂದಿಸಿದ್ದೆವೆ ಹಾಗೂ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ಹಾಗೂ ಉಚಿತವಾಗಿ ಗಾಳಿಪಟ ನೀಡಲಾಗುವುದು ಈ ಉತ್ಸವವಕ್ಕೆ ಇನ್ನರ್ ವ್ಹೀಲ್ ಸಂಸ್ಥೆ, ರೋಟ್ರಾಕ್ಟ್ ಸಂಸ್ಥೆ, ಮಂಗಸೂಳಿ ಪ್ರತಿಷ್ಠಾನ, ಇಂಟ್ರಾಕ್ಟ್ ಸಂಸ್ಥೆ, ಆರ್.ಎನ್.ಎ ಲ್ಯಾಂಡ್ ಡೆವಲಪರ್ಸ್ ಅವರುಗಳ ಸಹಕಾರವಿದೆ ಎಂದರು.
ಅನಂತರ ಅರುಣ ಯಲಗುದ್ರಿ ಅವರು ಸ್ವಾಗತಿಸಿದರು, ಅರುಣ ಸೌದಾಗರ ಅವರು ವಂದಿಸಿದರು, ಈ ವೇಳೆ ಡಾ ಪಿ ಪಿ ಮಿರಜ, ಪ್ರಫುಲ್ ಪಡನಾಡ, ಭರತ ಸೋಮಯ್ಯಾ ಅವರು ಉಪಸ್ಥಿತರಿದ್ದರು.