
ರುದ್ರಭೂಮಿಗಳ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಜರುಗಿಸಿ
ಜನರಿಗೆ ಅನುಕೂಲ ಮಾಡಿ ಕೊಡಿ
ಬೆಳಗಾವಿ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ
ಸಮಿತಿ ಅಧ್ಯಕ್ಷ ಜಯತೀರ್ಥ ಸವದತ್ತಿ ನೇತೃತ್ವದಲ್ಲಿ ಸಭೆ
ಬೆಳಗಾವಿ ನಗರದಲ್ಲಿರುವ ರುದ್ರಭೂಮಿಗಳ ನಿರ್ವಹಣೆಗೆ ಪಾಲಿಕೆ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಮಂಗಳವಾರ ಪಾಲಿಕೆಯ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜಯತೀರ್ಥ ಸವದತ್ತಿ ನೇತೃತ್ವದಲ್ಲಿ ನಡೆದ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರುದ್ರಭೂಮಿಯನ್ನು ನಿರ್ವಹಣೆ ಮಾಡುವಲ್ಲಿ ಕ್ರಮ ಜರುಗಿಸಬೇಕು. ಶಹಾಪುರದಲ್ಲಿ ಮೊದಲು ಸ್ಮಶಾನದಲ್ಲಿ ಜನರು ವಾಯು ವಿಹಾರ ಮಾಡುತ್ತಿದ್ದರು. ಆದರೆ ಕೆಲ ತಿಂಗಳಿನಿಂದ ಅದು ನಿರ್ವಹಣೆ ಮಾಡದೇ ಇರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸಂತೋಷ ಪೆಡ್ನೇಕರ್, ಅಭಿಜಿತ್ ಜವಳ್ಕರ್, ಶಿವಾಜಿರಾವ್ ಮಂಡೋಳ್ಕರ್, ಪಾಲಿಕೆ ಅಧಿಕಾರಿಗಳಾದ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.