ರಾಯಚೂರು

ಅಂಗನವಾಡಿ ಕೇಂದ್ರ-೩ ನೂತನ ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮುದಗಲ್ : ನೂತನವಾಗಿ ನಿರ್ಮಿತವಾದ ಅಂಗನವಾಡಿ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕಟ್ಟಡವನ್ನು ನೋಡಿ ಸಂತಸಪಟ್ಟು ಕೇಂದ್ರದ ಮಕ್ಕಳಿಗೆ ಸಮವಸ್ತ್ರ ಕೊಡಿಸುವ ಭರವಸೆಯನ್ನು ನೀಡಿದ ಅಧೀಕ್ಷಕಿ ಗ್ರೇಡ್೩ ಸರಸ್ವತಿಯವರು ಇಂದು ಮೇಗಳಪೇಟೆ ಅಂಗನವಾಡಿ ಕೇಂದ್ರ-೩ರ ಮಕ್ಕಳಿಗೆ ಖುದ್ದು ಶನಿವಾರ ಆಗಮಿಸಿ ಸಮವಸ್ತ್ರ ವಿತರಿಸಲಾಯಿತು.

ಪಟ್ಟಣದ ಮೇಗಳಪೇಟೆ ಅಂಗನವಾಡಿ ಕೇಂದ್ರ-೩ ನೂತನ ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ ಅವರು ಉಪಸ್ಥಿತರಿದ್ದರು. ಕಟ್ಟಡವನ್ನು ನೋಡಿ ಮಕ್ಕಳ ಹಾಜರಿಗೆ ಸಂತಸ ವ್ಯಕ್ತಪಡಿಸಿದ್ದರು. ಅಂದೇ ಕೇಂದ್ರ ದ ಮಕ್ಕಳಿಗೆ ಸಮವಸ್ತ್ರ ವಯಕ್ತಿಕವಾಗಿ ಕೊಡುತ್ತೇನೆಂದು ಭರವಸೆ ಕೊಟ್ಟು ಹೋಗಿದ್ದರು. ಇಂದು ಕೇಂದ್ರದ ೨೭ ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತç ವಿತರಿಸಿ ತಮ್ಮ ಸಂತೋಷವನ್ನು ಹಂಚಿಕೊಂಡರು ಬಾಲ್ಯದಿಂದಲೇ ಮಕ್ಕಳು ಸಮವಸ್ತçಧಾರಿಗಳಾಗಿ ಶೈಕ್ಷಣಿಕವಾಗಿ ಪ್ರೇರೇಪಣೆ ದೊರೆಯಲಿ ಎನ್ನುವದೇ ಉದ್ದೇಶ. ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ಶಿಸ್ತು ಕಲಿಯಲಿ ಎನ್ನುವದು ಮತ್ತೊಂದು ಉದ್ದೇಶ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.

ಈ ಸಮಯದಲ್ಲಿ ಮೇಲ್ವಿಚಾರಕಿ ಗುರುಬಸಮ್ಮ, ಅನಸೂಯಾ, ಮುಖಂಡರಾದ ಅಯ್ಯಪ್ಪಯ್ಯ, ಅಂಗನವಾಡಿ ಕಾರ್ಯಕರ್ತೆ ಬಸಮ್ಮ, ಶಾಂತಾ, ಪದ್ಮಾ, ನಾಗರತ್ನಾ ಸೇರಿದಂತೆ ಕೇಂದ್ರಗಳ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button