ರಾಯಚೂರು
ವಿಶ್ವಕರ್ಮ ಸಮಾಜದ ವತಿಯಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

ಮುದಗಲ್ ವಿಶ್ವಕರ್ಮ ಸಮಾಜದ ವತಿಯಿಂದ ಪಟ್ಟಣದಲ್ಲಿಸರಳವಾಗಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲಾಯಿತು
ಶ್ರೀನಿವಾಸ್ ಪತ್ತಾರ್ ಮಾತನಾಡಿ ಭಾರತೀಯ ಇತಿಹಾಸದಲ್ಲಿ ಕಲೆಗೆ ತನ್ನದೇ ಇತಿಹಾಸ ಇದೆ ಹಳೇಬೀಡು ಬೇಲೂರು ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಕೆತ್ತನೆಗಳ ಸಾಕ್ಷಿ ಎಂದರು ಶಿಲ್ಪಿ ಜಕಣಾಚಾರಿ ಅವರನ್ನು ಇಂದು ನಾವು ಸ್ಮರಿಸುವ ಮೂಲಕ ಕಲೆಗಳನ್ನು ಗೌರವದಿಂದ ಪೂಜಿಸಬೇಕಾಗುತ್ತದೆ ಅದರಂತೆ ನಮ್ಮ ಪ್ರಧಾನಿ ಮೋದಿಜಿ ಅವರು ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದರು ನಮ್ಮ ಸಂಸ್ಕೃತಿ ನಮ್ಮಲ್ಲಿನ ಕುಲಕಸುಬುಗಳಿಗೆ ಜೀವ ತುಂಬುವ ಕಾರ್ಯ ಮಾಡುತ್ತಿದ್ದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು
ಸಮಾಜದ ಮುಖಂಡರಾದ ಪ್ರಭಾಕರ್ ಪತ್ತಾರ್ ಡಾ ::ನಾರಾಯಣ ಶ್ರೀನಿವಾಸ್ ಪತ್ತಾರ್ ಡಾ: ಕೃಷ್ಣ ಉದಯ್ ಕುಮಾರ್ ಕಾಳಪ್ಪ ಬಡಿಗೇರ ಪುಷ್ಪ ಕ್ಕೆ ಪತ್ತಾರ್ ಅನುಸಿಯ ವನಜಾಕ್ಷಿ ಉಷಾ ಅನ್ನಪೂರ್ಣ ಹಾಗೂ ಸಮಾಜದ ಮುಖಂಡರು ಇದ್ದರು