ಮಲಪ್ರಭಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ.

ಬೆಳಗಾವಿ: ಖಾನಾಪುರ ಮಲಪ್ರಭಾ ನದಿಯ ಹಳೆಯ ಸೇತುವೆ ಬಳಿ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ
ಮೃತ ಯುವಕ ಬೆಳಗಾವಿ ತಾಲೂಕ ವನ್ನೂರು ಗ್ರಾಮದ ಸಮರ್ಥ ಚೌಗುಲೆ ಎಂದು ತಿಳಿದುಬಂದಿದೆ. ಭಾನುವಾರ ಧಾರ್ಮಿಕ ಕಾರ್ಯಗಳನ್ನು ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಖಾನಾಪುರ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುದ್ದಿ ತಿಳಿದ ಪಿಎಸ್ಐ ಲಾಲ್ ಸಾಬ್ ಗೌಂಡಿ ತಕ್ಷಣವೇ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆದುಕೊಂಡು ಬಂದು ಮುಳುಗಿರುವ ಯುವಕನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಕುರಿತು ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಗುದ್ದು ಸಾಬ್ ತೆಕಡಿ ಅವರು, ಹಳೆಯ ಸೇತುವೆ ಬಳಿ ನೀರಿನ ಆಳ ಹೆಚ್ಚು ಇರುವುದರಿಂದ ಜನರಿಗೆ ಅಪಾಯಗಳಾಗುತ್ತಿವೆ ಆದ್ದರಿಂದ ಕಡಿಮೆ ಆಳದ ನೀರಿರುವ ಮತ್ತೊಂದು ಬದಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ಪೂರೈಸುವಂಥ ಆಗಬೇಕು ಸಂಬಂಧಪಟ್ಟ ಇಲಾಖೆಯವರು ಈ ಕುರಿತು ಜಾಗೃತಿಯನ್ನು ವಹಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮೃತನ ಕುಟುಂಬಸ್ಥರು ಹಾಗೂ ವನ್ನೂರು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದು ಶೋಧನಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಹಕಾರ ನೀಡುತ್ತಿದ್ದಾರೆ.