ಬೆಳಗಾವಿಯಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಬಿಜೆಪಿ ನಾಯಕರ ವಿರೋಧ; ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ನಗರದಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ಸ್ಥಳೀಯ ಪ್ರಬಲ ಬಿಜೆಪಿ ನಾಯಕರು ವಿರೋಧ ಮಾಡುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಗೆ ಬಂದಾಗ ಘೋಷಣೆ ಮಾಡಿದ್ದರು. ಈಗ ನಾವು ಪದೇ ಪದೇ ಅವರಿಗೆ ಮನವಿ ಮಾಡಲು ಬರುವುದಿಲ್ಲ. ಅದು ಅವರ ನಾಯಕರಿಗೆ ಬಿಟ್ಟ ವಿಷಯ. ಆದರೆ. ರಾಜ್ಯ ಸರಕಾರದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.
ಇನ್ನು ನೂತನ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರದಿಂದ ಮಾಡುವುದು ಬಹಳ ಕಷ್ಟ ಇದೆ. ಖಾಸಗಿ ಅವರು ಕಾನೂನಾತ್ಮಕವಾಗಿ ಬಡಾವಣೆ ಮಾಡುವವರಿಗೆ ಸಹಕಾರ ಕೊಡುವುದು ಒಳ್ಳೆಯದು. ಕಳೆದ 10 ವರ್ಷಗಳಿಂದ ಕಣಬರಗಿಯಲ್ಲಿನ ಬಡಾವಣೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದರು.
ಇನ್ನು ಗ್ಯಾರಂಟಿ ಯೋಜನೆಯಿಂದ ಯಾವುದೇ ರೀತಿಯ ತೆರಿಗೆ ಹೆಚ್ಚಳ ಮಾಡಿಲ್ಲ. ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಬಿಟ್ಟರೆ ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ. ಬೇರೆ ರಾಜ್ಯದಲ್ಲಿ ನೋಡಿದರೆ ನಮ್ಮ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಕಡಿಮೆ ಮಾಡಲಾಗಿದೆ ಎಂದರು.
ಬೆಳಗಾವಿ ಎಪಿಎಂಸಿ ಮೊದಲ ರೀತಿ ಕಾರ್ಯನಿರ್ವಹಿಸಬೇಕು. ಖಾಸಗಿ ತರಕಾರಿ ಮಾರುಕಟ್ಟೆಯೂ ಸರಳವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಇನ್ನೊಂದು ಬಾರಿ ಸಭೆ ನಡೆಸಲಾಗುವುದು ಎಂದರು.