ಬೆಳಗಾವಿ
ಮೈಕ್ರೋ ಫೈನಾನ್ಸನವರ ಕಿರುಕುಳದ ವಿರುದ್ಧ ಗ್ರಾಹಕರು ದೂರು ನೀಡಿದ್ರೇ ಕ್ರಮ; ಸತೀಶ ಜಾರಕಿಹೊಳಿ

ಬೆಳಗಾವಿ: ಯಮಕನಮರಡಿ, ಗೋಕಾಕ ಹಾಗೂ ಹುಕ್ಕೇರಿಯಲ್ಲಿ ಸಾಕಷ್ಟು ಜನ ಮೈಕ್ರೋ ಫೈನಾನ್ಸನವರು ಕಿರುಕುಳ ನೀಡಿದ್ದಾರೆ. ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಇಂದು ಭಾನುವಾರ 76ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೆರಿಸಿದ ಬಳಿಕ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮೈಕ್ರೋ ಫೈನಾನ್ಸ್ ಹಾವಳಿಯ ಬಗ್ಗೆ ಪ್ರಾಥಮಿಕವಾಗಿ ಪೊಲೀಸರು ತನಿಖೆ ನಡೆಸಬೇಕು. ಯಮಕನಮರಡಿ, ಗೋಕಾಕ ಹಾಗೂ ಹುಕ್ಕೇರಿಯಲ್ಲಿ ಸಾಕಷ್ಟು ಜನ ಮೈಕ್ರೋ ಫೈನಾನ್ಸನವರು ಕಿರುಕುಳ ನೀಡಿದ್ದಾರೆ. ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು. ಈಗಾಗಲೇ ಸಿಎಂ ಅವರು ಮೈಕ್ರೋ ಫೈನಾನ್ಸ್ ಬಗ್ಗೆ ಕಾನೂನು ಜಾರಿಗೆ ತಂದಿದ್ದಾರೆ ಎಂದರು.