ಅಥಣಿ
ಮೊಸಳೆ ಪ್ರತಕ್ಷ ಆತಂಕದಲ್ಲಿ ತಾಂವಶಿ ಗ್ರಾಮದ ಗ್ರಾಮಸ್ಥರು

ಅಥಣಿ: ತಾಲೂಕಿನ ತಾಂವಶಿ ಗ್ರಾಮದ ಭಾವಿಯೊಂದರಲ್ಲಿ ದೊಡ್ಡ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು ಸ್ಥಳೀಯರಿಗೆ ಭಯ ಹುಟ್ಟಿಸಿದೆ.
ತಾಂವಶಿ ಗ್ರಾಮದ ಅಗ್ರಣಿ ನದಿ ದಡದ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ಮೊಸಳೆ ದೃಶ್ಯ ಸ್ಥಳೀಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಭಾವಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಇರುವುದರಿಂದ ಮೊಸಳೆ ಕಾರ್ಯಾಚರಣೆಗೆ ಅಡಚಣೆಯಾಗಿ ನೀರು ಖಾಲಿ ಮಾಡಿಸಿವಂತೆ ಸ್ಥಳೀಯರಿಗೆ ಅರಣ್ಯ ವಲಯ ಅಧಿಕಾರಿ ಶಿವಾಜಿ ಮುಂಜೆ ಮಾಹಿತಿ ನೀಡಿದ್ದಾರೆ.
ಎರಡು ದಿನಗಳಿಂದ ಮೊಸಳೆ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದ್ದೂ ಸ್ಥಳೀಯರು ಭಯದಲ್ಲೇ ಇರುವಂತಾಗಿದೆ. ಮೊಸಳೆ ಬೇಗ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.