ಬೆಳಗಾವಿ
ಬೆಳಗಾವಿಯಲ್ಲಿ ಮತ್ತೊಂದು ಮಗು ಮಾರಾಟ ಕೇಸ್: ಆರೋಪಿಗಳು ಅರೆಸ್ಟ್

ಬೆಳಗಾವಿ : ಇತ್ತೀಚೆಗೆ ಮಕ್ಕಳ ಮಾರಾಟ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ ಐದು ವರ್ಷದ ಗಂಡು ಮಗುವನ್ನು ಮಾರಿದ್ದ ಪ್ರಕರಣ ಭೇದಿಸಿದ ಹುಕ್ಕೇರಿ ಠಾಣೆ ಪೊಲೀಸರು, ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲ್ಲೂಕಿನ ಮಾದ್ಯಾಳದ ಸಂಗೀತಾ ಹಮ್ಮನ್ನವರ, ರತ್ನಾಗಿರಿ ಜಿಲ್ಲೆಯ ಚಿಪಳುನ ತಾಲ್ಲೂಕಿನ ನಿವಳಿಯ ಮೋಹನ ತಾವಡೆ ಮತ್ತು ಆತನ ಪತ್ನಿ ಸಂಗೀತಾ ತಾವಡೆ ಬಂಧಿತರು. ಇನ್ನಿಬ್ಬರ ಪತ್ತೆಗೆ ಶೋಧ ಮುಂದುವರೆದಿದೆ.