ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ವೇಳೆ ಚುನಾವಣೆಯೆ ರದ್ದು;ಬಿಜೆಪಿ ಪ್ರತಿಭಟನೆ

ವಿಜಯಪುರ:ತೀವ್ರ ಕುತೂಹಲ ಕೆರಳಿಸಿರುವ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ನಡೆಯುತ್ತಿದ್ದ ವೇಳೆಯೇ ಟ್ವಿಸ್ಟ್ ಪಡೆದುಕೊಂಡಿದೆ. ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ವೇಳೆ ಚುನಾವಣೆಯೆ ರದ್ದಾಗಿದೆ ಎನ್ನಲಾಗುತ್ತಿದೆ. ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಎಲೆಕ್ಷನ್ ಮುಂದೂಡಲಾಗಿದೆ. ಇನ ಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಚುನಾವಣೆ ಪ್ರಕ್ರಿಯೆ ವೇಳೆ ಸದಸ್ಯರ ಸದಸ್ಯತ್ವ ರದ್ದು ಕೋರಿ ಪ್ರಾದೇಶಿಕ ಆಯುಕ್ತರಿಗೆ ಉಪ ಮೇಯರ್ ದಿನೇಶ ಹಳ್ಳಿ ಅರ್ಜಿ ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರ್ ರಿಗೆ ಮನವಿ ನೀಡಿದ್ದರು. ಈ ಹಿನ್ನೆಲೆ ಚುನಾವಣೆ ಮುಂದೂಡಲಾಗಿದೆ. ಸಚಿವ ಎಂ ಬಿ ಪಾಟೀಲ್‌ರಿಗೆ ಮಣಿದು ಚುನಾವಣೆ ಮುಂದೂಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದೆ. ಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗ್ತಿದ್ದಾರೆ. ಇತ್ತ ಪಾಲಿಕೆಯಿಂದ ಸಚಿವ ಎಂ ಬಿ ಪಾಟೀಲ್ ಹೊರ ನಡೆದಿದ್ದಾರೆ. ಇನ್ನೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಾಲಿಕೆಯ ಒಳಗೆ ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಿಜೆಪಿಗರ ಪ್ರತಿಭಟನೆ ಮುಂದುವರೆದಿದೆ.