ಬೆಳಗಾವಿ

ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಗಾರ.

ದಿನಾಂಕ :18-3-2025 ರಂದು ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಚಿಕ್ಕೋಡಿ, ತಾಲ್ಲೂಕು ಪಂಚಾಯತ್ ಚಿಕ್ಕೋಡಿ, ನಿಪ್ಪಾಣಿ,ರವರ ಸಂಯುಕ್ತ ಆಶ್ರಯದಲ್ಲಿ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ WASH ಕಾರ್ಯಕ್ರಮ O&M, ನಿರ್ವಹಣೆ, VWSC ಸಮಿತಿ ಜವಾಬ್ದಾರಿ ಗಳು, 24/7 ನೀರಿನ ನಿರ್ವಹಣೆ, ODF ಉತ್ತಮ ನಿರ್ವಹಣೆ ಚಟುವಟಿಕೆಗಳನ್ನು ಉತ್ತಮ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಗಾರವನು ಆಯೋಜಿಸಲಾಗಿತ್ತು ಈ ಕಾರ್ಯಗಾರದಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚಿಸಲಾಯಿತು

1. ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ
2. ಮಾದರಿ ಗ್ರಾಮಗಳ ಘೋಷಣೆ
3. 24/7 ನೀರಿನ ಸೇವೆಗಳ ಬಗ್ಗೆ
4. GWM ಮಾದರಿಗಳ ನಿರ್ಮಾಣ ಮತ್ತು ಉತ್ತಮ ನಿರ್ವಹಣೆ
5. VWSC ಸಮಿತಿಗಳ ರಚನೆ ಪಾತ್ರ ಮತ್ತು ಜವಾಬ್ದಾರಿಗಳು.ಬ್ಯಾಂಕ್ ಖಾತೆ, ನಡವಳಿ,
6. Water metre management
7. ನೀರು ಮತ್ತು ನೈರ್ಮಲ್ಯ ವಿಷಯಗಳಲ್ಲಿನ ಕ್ಷೇತ್ರ ಮಟ್ಟದ ಸವಾಲುಗಳು
8. Water Tarif fixation

ಈ ಮೇಲಿನ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಮಾರ್ಗದರ್ಶನ ಸಲಹೆಗಳನ್ನು ತರಬೇತಿಯಲ್ಲಿ ಕೂಲಂಕುಶವಾಗಿ ಚರ್ಚಿಸಲಾಯಿತು.

ಸದರಿ ತರಬೇತಿಯಲ್ಲಿ ಶ್ರೀ ಪಾಂಡುರಂಗ ರಾವ್ ಕಾರ್ಯಪಲಕ್ ಅಭಿಯಂತರರು ಚಿಕ್ಕೋಡಿ ವಿಭಾಗ ಹಾಗೂ ತಾಲೂಕಿನ ಎಲ್ಲ ಕಾರ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು,ADPR, AEEs AE, JE, support engineers PDOs ಮತು ಸಂಪನ್ಮೂಲ ವ್ಯಕ್ತಿಗಳು, ನೀರು ಪರೀಕ್ಷಾ ಸಿಬ್ಬಂದಿಗಳು(Lab) ಗ್ರಾಕು ನೀ&ನೈ ವಿಭಾಗ ಚಿಕ್ಕೋಡಿ ಕಚೇರಿ ಸಿಬ್ಬಂದಿಗಳು ಹಾಗೂ KSWSP ಸಮಾಲೋಚಕರು, SBM ಸಮಾಲೋಚಕರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಮತ್ತು ಇತರರು ಭಾಗವಹಿಸಿ ತರಬೇತಿಯನ್ನು ಯಶಸ್ವಿಗೊಳಿಸಲಾಯಿತು.

    

Related Articles

Leave a Reply

Your email address will not be published. Required fields are marked *

Back to top button