ಕಿತ್ತೂರು ತಾಲೂಕ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ಸಾರ್ವಜನಿಕ ಕಂಗಾಲು

ಕಿತ್ತೂರ್ ರಾಣಿ ಚೆನ್ನಮ್ಮನ ತಾಲೂಕಿನಲ್ಲಿ ಸಾರ್ವಜನಿಕರ ಗೋಳಾಟ ಕೇಳುವರು ಯಾರು? ಎಂಬ ಪ್ರಶ್ನೆಗೆ ಉದ್ಭವವಾಗಿದೆ.ಆಹಾರ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ
ಸಾರ್ವಜನಿಕರ ಮಾಹಿತಿಯ ಮೇರೆಗೆ ಕಿತ್ತೂರಿನ ತಾಲೂಕ ಆಡಳಿತಕ್ಕೆ ಬೆಟ್ಟಿ ನೀಡಿದಾಗ ಅಲ್ಲಿರುವಂತ ಬ್ರಹ್ಮಾಂಡ ಬ್ರಷ್ಟಾಚಾರ ಮಾಧ್ಯಮವರ ಕ್ಯಾಮರಾ ಕಣ್ಣಿಗೆ ಬಿತ್ತುಒಂದು ಸಣ್ಣ ಕೆಲಸಕ್ಕೆ ಮೂರ್ನಾಲ್ಕು ತಿಂಗಳಿಂದ ಜನ ಅಲೆದಾಡುವ ಪರಿಸ್ಥಿತಿ ಕಿತ್ತೂರಿನಲ್ಲಿ ಮಾರ್ಪಾಡಾಗಿದೆ.
ಸಂಬಂಧಪಟ್ಟ ತಹಶೀಲ್ದಾರ ಉಪ ತಹಸಿಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕೇಳಿದರೆ ಮಾಧ್ಯಮದವರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ.ಹಾಗೂ ಸಾರ್ವಜನಿಕ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಿದರೆ ಅದೇ ಕುರ್ಚಿಯಲ್ಲಿ ಬೇರೆ ವ್ಯಕ್ತಿಯನ್ನು ಕೂರಿಸುವ ಕೆಲಸ ಕೂಡ ಇಲ್ಲಿ ನಡಿತಾ ಇದೆ. ತಮ್ಮದೇ ಆದ ಸರ್ಕಾರವನ್ನು ರಚಿಸಿ ತಮ್ಮದೇ ಆದ ಆಡಳಿತ ನಡೆಸುತ್ತಿರುವ ಕಿತ್ತೂರು ತಾಲೂಕ ಆಡಳಿತ ಅಧಿಕಾರಿಗಳು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದಂತ ತಹಶೀಲ್ದಾರ್ ಬಸವರಾಜ್ ಹಾದಿಮನಿ ಕೂಡ ಮೌನವಾಗಿದ್ದಾರೆ. ಸಾರ್ವಜನಿಕರು ಯಾವುದೇ ಕೆಲಸಕ್ಕೆ ಅಂತ ಆಡಳಿತ ಕಚೇರಿಗೆ ಬಂದರೆ ಅವರಿಗೆ ಉಡಾಫೆ ಉತ್ತರ ಕೊಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅಂತ ಹೇಳುವಂತ ಇಲ್ಲಿನ ಅಧಿಕಾರಿಗಳು
ಹಾಗೂ ಇಲ್ಲಿ ಕೆಲಸ ಮಾಡುವಂತಹ ಯಾವುದೇ ಅಧಿಕಾರಿ ಕೂಡ ಸರ್ಕಾರ ಕೊಟ್ಟಿರುವಂತಹ ಐಡಿ ಕಾರ್ಡ್ ಗಳನ್ನು ಕೂಡ ಬಳಕೆ ಮಾಡುತ್ತಿಲ್ಲ ಅವುಗಳನ್ನು ಎಲ್ಲೋ ಒಂದು ಕಡೆ ಇಟ್ಟು ಅದಕ್ಕೂ ಕೂಡ ಒಂದು ಉಡಾಫೆ ಉತ್ತರ ನೀಡುತ್ತಿರುವಂತ ಅಧಿಕಾರಿಗಳು.ಕಳೆದ ಮೂರು ನಾಲ್ಕು ತಿಂಗಳಿಂದ ಅಂಗವಿಕಲರ ಕಾರ್ಡ್ ಗೆ ಮತ್ತು ರೇಷನ್ ಕಾರ್ಡ್ ಗೆ ಓಡಾಡುತ್ತಿರುವಂಥ ಜನ,ಆಹಾರ ಇಲಾಖೆಯಲ್ಲಿ ಒಂದು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಬೇಕಾದರೆ ಸಾಕಷ್ಟು ಅಧಿಕಾರಿಗಳ ಸಹಿ ಕೂಡ ಬೇಕಾಗುತ್ತದೆ ಎಂದು ಹೇಳುವಂತೆ ಇಲ್ಲಿನ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೇಲಾಡುತ್ತಿದೆ ಕಿತ್ತೂರು ತಾಲೂಕ ಆಡಳಿತ.ಸಾರ್ವಜನಿಕರ ಪರವಾಗಿ ಮಾಧ್ಯಮದವರು ಪ್ರಶ್ನೆ ಕೇಳಲು ಹೋದಾಗ ಮಾಧ್ಯಮದರ ಮೇಲೆ ಹಲ್ಲೆ ಮಾಡುತ್ತಿರುವ ಅಧಿಕಾರಿಗಳು.