ಕಳ್ಳತನ ಪತ್ತೆಹಚ್ಚಲು ಮಸ್ಕಿ ಸಿಪಿಐ ನೇತೃತ್ವದಲ್ಲಿ ವಿಷೇಶ ತಂಡ ರಚನೆ.

ಮುದಗಲ್ : ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು,ಪತ್ತೆಹಚ್ಚಲು ಮಸ್ಕಿ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ರಾಯಚೂರು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಿ.ಹರೀಶ ಹೇಳಿದರು.
ಪಟ್ಟಣದ ೨೨-೨೩ ನೇ ವಾರ್ಡಿನಲ್ಲಿ ಭಾನುವಾರ ರಾತ್ರಿ ಇಬ್ಬರು ಕಳ್ಳರು ಮೂರು ಮನೆಗಳ ಕೀಲಿ ಮುರಿದು,ಒಂದು ಮನೆಯಲ್ಲಿ ಸುಮಾರು ೨೦೦ ಗ್ರಾಂ ಬಂಗಾರ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲಿಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರೆ ಕಳ್ಳರನ್ನು ಪತ್ತೆ ಹಚ್ಚಲು ಅನೂಕೂಲವಾಗಲಿದೆ.ಕಳ್ಳತನ ತಡೆಗಟ್ಟಲು ಪ್ರ‍್ರತಿಯೊಬ್ಬ ಮನೆ ಮಾಲೀಕರು ಸಿಸಿ ಕ್ಯಾಮರಾ ಅಳವಡಿಸಬೇಕು.ಮನೆಯ ಬಾಗಿಲುಗಳಿಗೆ ಸೂಕ್ತ ಲಾಕರ್ ಅಳವಡಿಸಬೇಕು.ಅನುಮಾನಸ್ಪದವಾಗಿ ರಾತ್ರಿ ಮತ್ತು ಹಗಲಿನಲ್ಲಿ ಅಲೆದಾಡುವ ವ್ಯಕ್ತಿಗಳು ಕಂಡು ಬಂದರೆ ೧೧೨ ಪೋಲಿಸ್ ವಾಹನಕ್ಕೆ ಕರೆ ಮಾಡಬೇಕು.ಪ್ರತಿದಿನ ಟ್ಯಾಪಿಕ್ ಸಮಸ್ಯೆ ಸರಿಪಡಿಸಲು ಮುಖ್ಯ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿರುವ ವಾಹನಗಳಿಗೆ ದಂಡ ವಿಧಿಸುವಂತೆ ಪಿಎಸೈ ಸೂಚಿಸಿದರು.ಈ ವೇಳೆ ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ,ಪಿಎಸೈ ವೆಂಕಟೇಶ ಮಾಡಗಿರಿ ಇದ್ದರು.