ಬೆಳಗಾವಿ

ಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್ ಹಿಡಿಶಾಪ ಹಾಕುತ್ತಿರುವ ಜನ

ಬೆಳಗಾವಿ:  ಹಲಗಾ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬ್ಲಾಕ್ ಆಗಿ ಉಂಟಾಗಿರುವ ಸಮಸ್ಯೆಯಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿಯ ಹಲಗಾ ಹತ್ತಿರ ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ಚರಂಡಿ ಬ್ಲಾಕ್ ಆದ ಹಿನ್ನೆಲೆ ಸ್ಥಳದಲ್ಲಿ ಕೊಳಚೆ ನೀರಿನಿಂದಾಗಿ ಗಬ್ಬುವಾಸನೆ ಕೂಡಿದೆ.

ಹೆದ್ದಾರಿ ಪ್ರಾಧಿಕಾರವು ಈ ಕುರಿತು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಲಿಲ್ಲವೆಂದರೇ ರೋಗರುಜಿನಗಳು ಹರಡುವ ಸಾಧ್ಯತೆಗಳಿವೆ. ಹಲಗಾ ಗ್ರಾಮ ಪಂಚಾಯಿತಿ ಕೂಡ ಇತ್ತ ಗಮನ ಹರಿಸುತ್ತಿಲ್ಲ. ಸುವರ್ಣಸೌಧದ ನೀರು ಕೂಡ ಇದೇ ಚರಂಡಿಯಲ್ಲಿ ಹರಿಯುತ್ತದೆ. ಗ್ರಾಮಸ್ಥರಿಂದ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button