ಮೈಸೂರ್

ಮೈಸೂರಿನಿಂದ ಅಯೋಧ್ಯೆಗೆ ಸೈಕಲ್ ಯಾತ್ರೆ ;ಪರಿಸರ ಜಾಗೃತಿ ಅಭಿಯಾನ

ಪರಿಸರ ಜಾಗೃತಿ ಅಭಿಯಾನ ಉದ್ದೇಶ ಹೊಂದಿರುವ ಮೈಸೂರಿನ ರೈತ, ಪರಿಸರವಾದಿ ಪಿ ಮಂಜುನಾಥ್ ಅವರು ಮೈಸೂರಿನಿಂದ ಅಯೋಧ್ಯೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದು, ಮಂಗಳವಾರ ಬೆಳಗಾವಿಗೂ ಆಗಮಿಸಿ ಜಾಗೃತಿ ಮೂಡಿಸಿದರು.

 ಪಿ ಮಂಜುನಾಥ್ ಅವರು ಮೂಲತಃ ರೈತರು ಹಾಗೂ ಪರಿಸರವಾದಿಗಳು ಈಗಾಗಲೇ ಮಲೆ ಮಹದೇಶ್ವರ ಬೆಟ್ಟ ಹಾಗೂ ಚಾಮುಂಡಿ ಬೆಟ್ಟಗಳಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಈ ಪರಿಸರಗಳಲ್ಲಿ ಪರಿಸರಕ್ಷಣೆಗಾಗಿ ಟಾಸ್ಕ್ ಪೋಸ್ ರಚನೆಯಾಗಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಮೈಸೂರಿನಿಂದ ಅಯೋಧ್ಯೆಗೆ ಪರಿಸರ ರಕ್ಷಣೆಗಾಗಿ ಸೈಕಲ್ ಯಾತ್ರೆ ಹಮ್ಮಿಕೊಂಡಿರುವ ಅವರು ಕೆ ಆರ್ ಪೇಟೆ ಬಡವರ ಶಿವಮೊಗ್ಗ ಹಾವೇರಿ ಹಾಗೂ ಸೌದತ್ತಿ ಕ್ಷೇತ್ರಕ್ಕೆ ಹೋಗಿ ಎಲ್ಲಮ್ಮ ಎಲ್ಲಮ್ಮ ದೇವಿಯ ದರ್ಶನ ಪಡೆದು ನಂತರ ಇತಿಹಾಸಿಕ ಚನ್ನಮ್ಮನ ಕಿತ್ತೂರಿಗೆ ಬಂದು ಮಂಗಳವಾರ ಬೆಳಗಾವಿಗೆ ಸೈಕಲ್ ಜಾಥಾ ಮೂಲಕ ಬಂದು ನಗರದಲ್ಲಿ ಪರಿಸರ ಜಾಗೃತಿ ಮೂಡಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಈಗಾಗಲೇ 600 ಕಿಲೋಮೀಟರ್ ಕ್ರಮಿಸಿದ್ದು, ಮುಂದೆ ಮಹಾರಾಷ್ಟ್ರ ಮಧ್ಯಪ್ರದೇಶದ ಮೂಲಕ ಶತಮಾನದ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಅಯೋಧ್ಯೆಯಲ್ಲಿ ಪರಿಸರ ಜಾಗೃತಿಯ ನನ್ನ ಗುರಿ ತಲುಪುತ್ತೇನೆ ಸಮುದ್ರ ನದಿ ಹಾಗೂ ಎಲ್ಲಮ್ಮ ನೀರಿನ ಮೂಲಗಳ ದಂಡೆಗಳಲ್ಲಿ ಹಾಗೂ ನಗರದ ಮುಂದೆ ಹಿಂದೆ ಪ್ಲಾಸ್ಟಿಕ್ ಹಾಗೂ ಕಸ ಹಾಕಿ ಪರಿಸರ ನಾಶ ಮಾಡುತ್ತಿದ್ದು ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಆದ್ದರಿಂದ ಸಾರ್ವಜನಿಕರು ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಬೇಕು ಅರಣ್ಯವನ್ನು ವನ್ಯಜೀವಿಗಳನ್ನು ಸಂರಕ್ಷಿಸಬೇಕು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು

Related Articles

Leave a Reply

Your email address will not be published. Required fields are marked *

Back to top button