ಶ್ರೀವೀರಭದ್ರೇಶ್ವರ ದರ್ಶನ ಪಡೆದರೆ ಕುಂಭ ಮೇಳಕ್ಕೆ ಹೋಗಿ ಬಂದಂತೆ; ಮಹಾಂತೇಶ ಕವಟಗಿಮಠ

ಚಿಕ್ಕೋಡಿ: ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ನಿಸ್ವಾರ್ಥ ಭಾವನೆ ಕೂಡಿದರೆ ಅದೇ ಧರ್ಮ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಶೈಲ ಜಗದ್ಗುರು ಡಾ! ಚನ್ನ ಸಿದ್ದರಾಮಯ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧರ್ಮ ಜಾಗೃತಿ ಹಾಗೂ ಸಾಂಸ್ಕೃತಿಕ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಾನವ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ಧರ್ಮ. ಧರ್ಮದ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತವೆ ಅಥವಾ ಇಲ್ಲವೋ ಎಂಬುದು ಧರ್ಮ ಜಾಗೃತಿ ಕಾರ್ಯಕ್ರಮದ ಮೂಲಕ ಚರ್ಚೆ ಅವಶ್ಯಕತೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಯಡೂರು ಕ್ಷೇತ್ರವು ಅತ್ಯಂತ ವೇಗಗತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದೆ. ಪ್ರಯಾಗ ರಾಜ್ ಕುಂಭಮೇಳವು ಅತ್ಯಂತ ವೈಭವ ಪೂರಕವಾಗಿ ನಡೆಯುತ್ತಿದೆ. ಆದರೆ ನಮಗೆ ಕುಂಭ ಮೇಳವನ್ನು ನೋಡುವುದಕ್ಕೆ ಆಗಲಿಲ್ಲ ಎಂದರೆ ಯಡೂರಿನಲ್ಲಿ ವೀರಭದ್ರೇಶ್ವರ ದರ್ಶನವನ್ನು ಪಡೆದರೆ ಪ್ರಯಾಗರಾಜಕ್ಕೆ ಹೋಗಿಬಂದಂತೆ ಎಂದರು.ಪಾವನ ಸಾನಿಧ್ಯವಹಿಸಿದ್ದ ಶ್ರೀಶೈಲ್ ಜದ್ಗುರುಗಳು,ಜಮಖಂಡಿ ಶಾಸಕರಾದ ಜಗದೀಶ ಗುಡಗುಂಟಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.